ಸೋಮವಾರ, ಜೂನ್ 27, 2022
27 °C
ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಗಳಲ್ಲಿ ಭದ್ರ; 31ರಂದು ಮತ ಎಣಿಕೆ

ಚಿಕ್ಕಮಗಳೂರು ಗ್ರಾ.ಪಂ ಚುನಾವಣೆ; ಶಾಂತಿಯುತ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆ ಮತದಾನ ಸೋಮವಾರ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ಬೆಳಿಗ್ಗೆ ಮತದಾನ ಕಡಿಮೆ ಇತ್ತು. ಮಧ್ಯಾಹ್ನ ಹೊತ್ತಿಗೆ ಬಿರುಸುಗೊಂಡಿತು.

ಮೇಗೆ ಅವಧಿ ಮುಗಿವ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 81.42 ಮತದಾನ ಆಗಿದೆ. ಒಟ್ಟು 47367ಮತದಾರರ ಪೈಕಿ 38564 ಮತದಾರರು ಹಕ್ಕು ಚಲಾಯಿಸಿದ್ದಾರೆ.

ವಿವಿಧ ಕಾರಣಗಳಿಂದ ಖಾಲಿ ಇರುವ ಪಂಚಾಯಿತಿಗಳ ಉಪಚುನಾವಣೆಯಲ್ಲಿ ಶೇ 77.22 ಮತದಾನ ಆಗಿದೆ. 40,422 ಮತದಾರರ ಪೈಕಿ 31,215 ಮಂದಿ ಮತ ಚಲಾಯಿಸಿದ್ದಾರೆ.

31ರಂದು ಮತ ಎಣಿಕೆ: ಇದೇ 31 ರಂದು ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಪ್ರಕ್ರಿಯೆ ಶುರುವಾಗಲಿದೆ.

ಚಿಕ್ಕಮಗಳೂರು ತಾಲ್ಲೂಕಿನ 13, ಕಡೂರು ತಾಲ್ಲೂಕಿನ 7 , ಮೂಡಿಗೆರೆ ತಾಲ್ಲೂಕಿನ 6, ಎನ್‌.ಆರ್‌.ಪುರ ತಾಲ್ಲೂಕಿನ 4, ಕೊಪ್ಪ ತಾಲ್ಲೂಕಿನ 2 ಪಂಚಾಯಿತಿಗಳ 257 ಸ್ಥಾನಗಳಿಗೆ 663 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಎಲ್ಲ ಕಡೆ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು