ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡದ ಬದುಕಿನಿಂದ ಅನಾರೋಗ್ಯ

ಬೀರೂರು ಕನ್ನಡ ಸಂಘದ ಸುವರ್ಣ ಮಹೋತ್ಸವ: ಆರೋಗ್ಯ ಶಿಬಿರ
Last Updated 12 ನವೆಂಬರ್ 2022, 12:55 IST
ಅಕ್ಷರ ಗಾತ್ರ

ಬೀರೂರು: ಸತ್ವಯುತ ಆಹಾರ, ಶಿಸ್ತಿನ ಜೀವನ ಶೈಲಿ ಮತ್ತು ಲಘು ವ್ಯಾಯಾಮದ ಮೂಲಕ ಚಟುವಟಿಕೆಯ ಬದುಕು ಅನುಸರಿಸಿ ಎಂದು ಎಂದು ಶಿವಮೊಗ್ಗ ಸುಬ್ಬಯ್ಯ ಆಸ್ಪತ್ರೆಯ ತಜ್ಞ ವೈದ್ಯ ಡಾ.ಕೆ.ಸಿ.ಶೇಖರಪ್ಪ ಹೇಳಿದರು.

ರಾಜ್ಯೋತ್ಸವ ಮತ್ತು ಕನ್ನಡ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ಸಬ್ಬಯ್ಯ ವೈದ್ಯಕೀಯ ಬೋಧನಾ ಆಸ್ಪತ್ರೆ ಸಂಯುಕ್ತವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡದ ಜೀವನಶೈಲಿ ಹಲವು ರೋಗಗಳಿಗೆ ಕಾರಣವಾಗುತ್ತದೆ. ಆರೋಗ್ಯ ಸಮಸ್ಯೆಗಳು ಏನಾದರೂ ಕಂಡುಬಂದರೆ ತಜ್ಞ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದರು.

ಸುಬ್ಬಯ್ಯ ವೈದ್ಯಕೀಯ ವಿದ್ಯಾಲಯ ಅಧೀಕ್ಷಕ ಡಾ.ಎಚ್.ಎಂ.ಶಿವಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯ ಫಲವಾಗಿ ಮಧುಮೇಹ, ರಕ್ತದೊತ್ತಡ, ಹೃದಯ ರೋಗ, ಮೂತ್ರಕೋಶ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ.ವೈದ್ಯರಿಂದ ಚಿಕಿತ್ಸೆ ಪಡೆದು ರೋಗಮುಕ್ತರಾಗುವ ಅವಕಾಶಗಳಿವೆ. ಈ ಬಗ್ಗೆ ಎಚ್ಚರವಿರಲಿ ಎಂದರು.

ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥ ಗೌಡ ಮಾತನಾಡಿ, ಸುಬ್ಬಯ್ಯ ಆಸ್ಪತ್ರೆಯ ವತಿಯಿಂದ ನೀಡುವ ಕಾರ್ಡ್ ಪಡೆದ ನೊಂದಾಯಿಸಲ್ಪಟ್ಟ ರೋಗಿಗಳಿಗೆ ತಪಾಸಣೆ ಸಲುವಾಗಿ ಸಂಘದ ಆವರಣದಿಂದ ಪ್ರತಿ ಸೋಮವಾರ ಮತ್ತು ಗುರುವಾರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

ಶಿಬಿರದಲ್ಲಿ ಕಣ್ಣಿನ ಪೊರೆ ಬೆಳೆದು ಶಸ್ಸತ್ರಚಿಕಿತ್ಸೆ ಅಗತ್ಯವಿರುವ 75 ಜನರನ್ನು ಗುರತಿಸಲಾಯಿತು. ಬೀರೂರು ಮತ್ತು ಸುತ್ತಮುತ್ತಲ ಗ್ರಾಮಗಳ 460ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ವೈದ್ಯರಾದ ಡಾ.ಉದಯಶಂಕರ್, ಡಾ. ಸುರೇಶ್.ಬಿ.ಪಿ, ಡಾ.ಪಲ್ಲವಿ, ವೈದ್ಯಾಧಿಕಾರಿ ಡಾ.ಕೆಂಚೇಗೌಡ, ಡಾ.ಎ.ಎಸ್.ಸಜ್ಜನರ್, ಕನ್ನಡ ಸಂಘದ ಉಪಾಧ್ಯಕ್ಷ ಬಿ.ಆರ್.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ವಿ.ನಾಗೇಂದ್ರ ಶ್ರೇಷ್ಠಿ, ಖಜಾಂಚಿ ಡಿ.ಆರ್.ರಮೇಶ್, ವ್ಯವಸ್ಥಾಪಕ ರಮೇಶ್ ಮತ್ತು ನಿರ್ದೇಶಕರು ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT