ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ ,ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆ ಮುಂದುವರಿದಿರುವುದರಿಂದ ಕಾಫಿನಾಡಿನಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ. ಕೊಟ್ಟಿಗೆಹಾರದಲ್ಲಿ ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಿಗ್ಗೆವರೆಗೆ 56.2ಮಿ.ಮೀಯಷ್ಟು ಮಳೆಯಾಗಿದೆ.
ಅರೆಬಿಕಾ ಕಾಫಿ ಕೆಲವು ಕಡೆ ಹಣ್ಣಾಗುತ್ತಿದ್ದು ಮಳೆಯಿಂದ ತೊಂದರೆ ಅನುಭವಿಸುವಂತಾಗಿದೆ. ಮಳೆಯಿಂದ ರೊಬಸ್ಟಾ ಕಾಫಿ ಕೂಡ ಉದುರುತ್ತಿದೆ. ಶೀತ ಬಾಧೆಯಿಂದ ಅಡಿಕೆ ಬೆಳೆಗೂ ಹಾನಿ ಆಗಿದೆ. ಕೊಟ್ಟಿಗೆಹಾರ, ಅತ್ತಿಗೆರೆ ಸೇರಿದಂತೆ ಹಲವೆಡೆ ವಿದ್ಯುತ್ ಕೈಕೊಟ್ಟಿದ್ದು ಜನರು ತೊಂದರೆ ಅನುಭವಿಸುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.