ಯರದಕೆರೆಯಲ್ಲಿ ಒಂದು ಮನೆ ಕುಸಿದಿದೆ. ಶ್ರೀರಾಂ ಪುರದಲ್ಲಿ ಹತ್ತು ಮನೆಗಳಿಗೆ ನೀರು ನುಗ್ಗಿದೆ. ಕೆ.ಎಂ.ರಸ್ತೆ ಹಾದು ಹೋಗಿರುವ ಲಕ್ಷ್ಮೀಪುರ ಗ್ರಾಮದಲ್ಲಿ ಮಳೆ ನೀರು 30ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ರಸ್ತೆ ಪಕ್ಕ ಅಪೂರ್ಣಗೊಂಡಿರುವ ಚರಂಡಿ ತುಂಬಿ ನೀರು ಮುಂದೆ ಹರಿದು ಹೋಗಲಾಗದೆ ಮನೆಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿ ಹೆದ್ದಾರಿ ತಡೆಗೆ ಪ್ರಯತ್ನಿಸಿದರು. ಸ್ಥಳಕ್ಕೆ ತಹಶೀಲ್ದಾರ್ ಪೂರ್ಣಿಮಾ, ಪಿಎಸ್‌ಐ ಪವನ್ ಕುಮಾರ್ ಭೇಟಿ ನೀಡಿದರು.