ಮಂಗಳವಾರ, ಸೆಪ್ಟೆಂಬರ್ 27, 2022
27 °C

ಭಾರೀ ಮಳೆ ಹಿನ್ನೆಲೆ: ಕಳಸ– ಕುದುರೆಮುಖ ರಸ್ತೆ ಸಂಚಾರ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಕಳಸ ತಾಲ್ಲೂಕಿನ ಜಾಂಬಳೆ ಪ್ರದೇಶದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು  ಕಳಸ– ಕುದುರೆಮುಖ ಮಾರ್ಗದಲ್ಲಿ ಸಂಚಾರಕ್ಕೆ ಬಂದ್‌ ಆಗಿದೆ. 

ಕಳಸ, ಸಂಸೆ, ನೆಲ್ಲಿಬೀಡು ಭಾಗದಲ್ಲಿ ತೋಟ, ಜಮೀನುಗಳಿಗೆ ನೀರು ನುಗ್ಗಿದೆ. ಮೂಡಿಗೆರೆ ತಾಲ್ಲೂಕಿನ ಬಣಕಲ್‌ನ ಆರೋಗ್ಯ ಸಿಬ್ಬಂದಿ ವಸತಿ ಗೃಹ ಮತ್ತು ಉರ್ದು ಪ್ರಾಥಮಿಕ ಶಾಲೆಯ ಶೌಚಾಲಯದ ಮೇಲೆ ವೃಕ್ಷ ಉರುಳಿದೆ. ಹಾನಗಸಿ ಪ್ರದೇಶದಲ್ಲಿ ಧರೆ ಕುಸಿದಿದೆ. ಚಿನ್ನಿಗ ಗ್ರಾಮದಲ್ಲಿ ಮನೆಯೊಂದು ಹಾನಿಯೊಂದು ಹಾನಿಯಾಗಿದ್ದು, ಕುಟುಂಬಕ್ಕೆ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಲಾಗಿದೆ. 

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 15 ಮನೆಗಳು ಹಾನಿಯಾಗಿವೆ.  ಕೆರೆಕಟ್ಟೆ– 16.3, ಹೊಸಕೆರೆ– 14.3, ಕೊಟ್ಟಿಗೆಹಾರ –12.3, ಹಿರೇಬೈಲು– 11, ಕಮ್ಮರಡಿ– 10.5 ಸೆಂ.ಮೀ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು