ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ | ಚುರುಕುಗೊಂಡ ಮಳೆ: ಮರ ಬಿದ್ದು ಮನೆಗೆ ಹಾನಿ

Published 23 ಜೂನ್ 2024, 15:36 IST
Last Updated 23 ಜೂನ್ 2024, 15:36 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಮಧ್ಯಾಹ್ನದ ಬಳಿಕ ಮಳೆ ಚುರುಕುಗೊಂಡಿದ್ದು, ತಡ ರಾತ್ರಿಯವರೆಗೂ ಧಾರಾಕಾರವಾಗಿ ಸುರಿಯಿತು.

ಶನಿವಾರ ಸಂಜೆ ಅರ್ಧಗಂಟೆ ಬಿರುಸಿನ ಮಳೆ ಸರಿದು ನಂತರ ಬಿಡುವು ನೀಡಿತ್ತು. ಭಾನುವಾರ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಧಾರಾಕಾರವಾಗಿ ಮಳೆ ಸುರಿಯಲು ಪ್ರಾರಂಭಿಸಿತು. ಉತ್ತಮ ಮಳೆ ಲಭಿಸಿದ್ದರಿಂದ ಹರಿವಿನ ಮಟ್ಟ ಕಡಿಮೆಯಾಗಿದ್ದ ನದಿಗಳಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಸಸಿಮಡಿ ನಿರ್ಮಾಣಕ್ಕಾಗಿ ಭತ್ತ ಹಾಕಿದ್ದ ರೈತರಿಗೆ ಮಳೆಯು ವರದಾನವಾಯಿತು.

ಮಳೆಯಿಂದಾಗಿ ತಾಲ್ಲೂಕಿನ ತ್ರಿಪುರ ಗ್ರಾಮದ ಗಿರೀಶ್ ಎಂಬುವವರ ಮನೆಯ ಮೇಲೆ ಮರ ಬಿದ್ದು ಚಾವಣಿ, ಗೋಡೆ ಜಖಂಗೊಂಡು ನಷ್ಟವಾಗಿದೆ. ಬಾಪುನಗರದಲ್ಲಿ ರಸ್ತೆ ಬದಿಯ ತಡೆಗೋಡೆ ಕುಸಿದು ಹಾನಿಯಾಗಿದೆ. ಮಳೆಯೊಂದಿಗೆ ಮಂಜುಮುಸಿಕಿದ ವಾತಾವರಣ ಉಂಟಾಗಿದ್ದರಿಂದ ಹೆದ್ದಾರಿಯಲ್ಲಿ ರಸ್ತೆ ಕಾಣದೇ ವಾಹನ ಸವಾರರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT