ಸೋಮವಾರ, ಸೆಪ್ಟೆಂಬರ್ 27, 2021
28 °C
‘ಪೊಲೀಸ್‌’ ಸೋಗಿನಲ್ಲಿ ಹಣಕ್ಕೆ ಬೇಡಿಕೆ

ಹನಿ ಟ್ರ್ಯಾಪ್‌: 13 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಇಬ್ಬರನ್ನು ‘ಹನಿ ಟ್ರ್ಯಾಪ್‌’ ಖೆಡ್ಡಾಕ್ಕೆ ಬೀಳಿಸಿ, ನಂತರ ‘ಪೊಲೀಸ್‌’ ಸೋಗಿನಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಜಾಲವನ್ನು ಭೇದಿಸಿ 13 ಮಂದಿಯನ್ನು ಬಂಧಿಸಲಾಗಿದೆ.
ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಜಾಲವನ್ನು ಭೇದಿಸಿದ್ದಾರೆ. ಏಳು ಪುರುಷರು, ಆರು ಮಹಿಳೆಯರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹ 40 ಸಾವಿರ ನಗದು, ಆಟೊರಿಕ್ಷಾ, ದ್ವಿಚಕ್ರವಾಹನ, ಮೂರು ಕಾರು, 17 ಮೊಬೈಲ್‌ ಫೋನ್‌, 24 ಸಿಮ್‌ ಕಾರ್ಡ್‌ ವಶಪಡಿಸಿಕೊಳ್ಳಲಾಗಿದೆ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಂಬಂಧಿಕರೊಬ್ಬರಿಗೆ 10 ಸಾವಿರ ಹಣ ಕೊಡುವಂತೆ ಪರಿಚಿತ ಮಹಿಳೆಯೊಬ್ಬರು ವ್ಯಕ್ತಿಗೆ ಹೇಳಿದ್ದಾರೆ. ಆತ ಸ್ನೇಹಿತನೊಂದಿಗೆ ಹಣ ಕೊಡಲು ಮಹಿಳೆ ಹೇಳಿದ್ದ ಮನೆಗೆ ಹೋಗಿದ್ದಾರೆ.
ಆ ಮನೆಯಲ್ಲಿದ್ದ ಮಹಿಳೆಯೊಂದಿಗೆ ಮಾತನಾಡುವಾಗ ಐವರು ಏಕಾಏಕಿ ನುಗ್ಗಿದ್ದಾರೆ. ಇದು ವೇಶ್ಯಾವಾಟಿಕೆಯ ಮನೆ ಹೇಳಿ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಬಳಿ ಇದ್ದ ₹ 75 ಸಾವಿರ ನಗದು ಕಿತ್ತುಕೊಂಡು, ಬಟ್ಟೆ ಬಿಚ್ಚಿಸಿದ್ದಾರೆ. ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಬೆತ್ತಲೆಯಾಗಿ ಅವರ ಜತೆ ಮಲಗಿಕೊಂಡಿದ್ದಾರೆ. ಒಬ್ಬರು ಅದನ್ನು ವಿಡಿಯೋ ಮಾಡಿದ್ದಾರೆ.
ನಾವು ‘ಪೊಲೀಸರು’ ನಿಮ್ಮನ್ನು ಬಂಧಿಸಿ ಕರೆದೊಯ್ಯುತ್ತೇವೆ, ₹ 20 ಲಕ್ಷ ಕೊಟ್ಟರೆ ಬಿಡುತ್ತೇವೆ. ಇಲ್ಲದಿದ್ದರೆ ವಿಡಿಯೊ ವೈರಲ್‌ ಮಾಡುತ್ತೇವೆ ಎಂದು ಇಬ್ಬರಿಗೂ ಬೆದರಿಕೆಯೊಡ್ಡಿದ್ದಾರೆ.
ಎರಡು ಲಕ್ಷ ಕೊಡುವುದಾಗಿ ಅವರಿಬ್ಬರು ಹೇಳಿದ್ದಾರೆ. ಇಬ್ಬರಿಗೂ ಬಟ್ಟೆ ತೊಡಿಸಿಕೊಂಡು ಕಾರಿನಲ್ಲಿ ಎಟಿಎಂ ಕರೆದೊಯ್ದು, ₹ 25 ಸಾವಿರ ಡ್ರಾ ಮಾಡಿಸಿಕೊಂಡಿದ್ದಾರೆ. ಸಂಜೆಯೊಳಗೆ ಒಂದು ಲಕ್ಷ ನೀಡಬೇಕು, ವಿಚಾರ ಯಾರಿಗಾದರೂ ಹೇಳಿದರೆ ವಿಡಿಯೊ ವೈರಲ್‌ ಮಾಡುವುದಾಗಿ ಹೆದರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ದೂರು ನೀಡಿದ್ದರು. ಈ ಜಾಲವು ಇದೇ ರೀತಿ ಬಹಳ ಮಂದಿಗೆ ವಂಚನೆ ಮಾಡಿರುವ ಗುಮಾನಿ ಇದೆ. ಪತ್ತೆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ

ವೇಶ್ಯಾವಾಟಿಕೆಗೆ ಮನೆಗೆ ಕರೆದು ಅಶ್ಲೀಲ ವಿಡಿಯೋ ಮಾಡಿ, ‘ಪೊಲೀಸ್‌’ ಸೋಗಿನಲ್ಲಿ ಬೆದರಿಕೆ ಹಾಕಿ ₹75 ಸಾವಿರ ಲಪಾಟಿಸಿದ್ದಾರೆ ಎಂದು ಒಬ್ಬರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚಕರ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು