ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಟ್ಟಿಗೆಹಾರ: ನಾಳೆ ಹೊಸಕ್ಕಿ ಹಬ್ಬ ಆಚರಣೆ

Published : 7 ಸೆಪ್ಟೆಂಬರ್ 2024, 7:47 IST
Last Updated : 7 ಸೆಪ್ಟೆಂಬರ್ 2024, 7:47 IST
ಫಾಲೋ ಮಾಡಿ
Comments

ಕೊಟ್ಟಿಗೆಹಾರ: ಸೆ.8ರಂದು ಸಂತ ಮರಿಯಮ್ಮನವರ ಹಬ್ಬವನ್ನು ‘ಹೊಸಕ್ಕಿ ಹಬ್ಬ’ವಾಗಿ ಆಚರಿಸಲಾಗುತ್ತದೆ. ಈ ಹಬ್ಬಕ್ಕಾಗಿ ಆಗಸ್ಟ್ 31ರಿಂದಲೇ ಸಿದ್ಧತೆಗಳು ಆರಂಭಗೊಂಡಿವೆ. ಮೇರಿ ಮಾತೆಯ ಪ್ರತಿಮೆಗೆ ಹೂವುಗಳನ್ನು ಅರ್ಪಿಸಿ ಪ್ರತಿ ಚರ್ಚುಗಳಲ್ಲೂ ನೊವೆನಾ ಪ್ರಾರ್ಥನೆ ಆರಂಭಿಸಲಾಗುತ್ತದೆ.

ಪ್ರತಿ ದಿನವೂ ನೊವೆನಾ ಪ್ರಾರ್ಥನೆಯಲ್ಲಿ ಭಾಗವಹಿಸಿ, ಹೂವುಗಳನ್ನು ತಂದು ಅರ್ಪಿಸಿದ ಮಕ್ಕಳಿಗೆ ಕೊನೆಯ ದಿನವಾದ ಸೆ. 8ರಂದು ಕಬ್ಬು ವಿತರಿಸಿ ಸಿಹಿ ನೀಡಲಾಗುತ್ತದೆ.ಹೊಸಕ್ಕಿ ಹಬ್ಬದ ದಿನ ಭತ್ತದ ತೆನೆಗಳನ್ನು ಚರ್ಚ್‌ಗಳಲ್ಲಿ ದರ್ಮಗುರುಗಳು ಆಶೀರ್ವದಿಸಿ ಭಕ್ತರಿಗೆ ನೀಡುತ್ತಾರೆ. ಅದನ್ನು ಮನೆಗೆ ತಂದು, ಹೊಸಕ್ಕಿ ಸೇರಿಸಿ ತಯಾರಿಸಿದ ಪಾಯಸವನ್ನು ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಸೇವಿಸುತ್ತಾರೆ.

ಉದ್ಯೋಗದ ನಿಮಿತ್ತ ಕುಟುಂಬದ ಸದಸ್ಯರು ಬೇರೆ ಊರುಗಳಲ್ಲಿ ನೆಲಸಿದ್ದರೂ ಹೊಸಕ್ಕಿ ಹಬ್ಬದ ದಿನ ಮನೆಗೆ ಬಂದು ಕುಟುಂಬ ಸದಸ್ಯರ ಜತೆಗೆ ಹಬ್ಬ ಆಚರಿಸುವ ಪದ್ದತಿ ಹಿಂದಿನಿಂದಲೂ ರೂಢಿಯಲ್ಲಿದೆ.  ಹೊಸಕ್ಕಿ ಹಬ್ಬವನ್ನು ತುಳುವಿನಲ್ಲಿ ‘ಕುರಾಲ್ ಪರ್ಬ’ ಕೊಂಕಣಿಯಲ್ಲಿ ಮೋಂತಿ ಸಾಯ್ಬಿಣಿಚೆಂ ಫೆಸ್ತ್ ಎಂದು ಕರೆಯಲಾಗುತ್ತದೆ.

ಬಾಳೂರು ಚರ್ಚ್‌ನಲ್ಲಿ ಭಕ್ತರು ಮಾತೆ ಮರಿಯಮ್ಮನವರಿಗೆ ನೊವೆನಾ ಪ್ರಾರ್ಥನೆ ಬಳಿಕ ಹೂವುಗಳನ್ನು ಅರ್ಪಿಸಿದರು
ಬಾಳೂರು ಚರ್ಚ್‌ನಲ್ಲಿ ಭಕ್ತರು ಮಾತೆ ಮರಿಯಮ್ಮನವರಿಗೆ ನೊವೆನಾ ಪ್ರಾರ್ಥನೆ ಬಳಿಕ ಹೂವುಗಳನ್ನು ಅರ್ಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT