ಕಡೂರು: ತಾಲ್ಲೂಕು ಜಾನಪದ ಸಮ್ಮೇಳನವನ್ನು ಮೇ 25ರಂದು ಚಿಕ್ಕನಲ್ಲೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಬಿ.ಸುರೇಶ್ ಹೇಳಿದರು.

ಚಿಕ್ಕನಲ್ಲೂರಿನಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಜಾನಪದ ಸಂಸ್ಕೃತಿ ದೂರವಾಗಿ ಅಲ್ಲಿ ಅನ್ಯ ಸಂಸ್ಕೃತಿ ಪಾರಮ್ಯ ಸಾಧಿಸುತ್ತಿರುವುದು ವಿಷಾದನೀಯ. ಆದ್ದರಿಂದ ಜಾನಪದದ ಪುನರುಜ್ಜೀವನಕ್ಕೆ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ ಕಡೂರು ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ ಆಚಾರ್, ‘ತಾಲ್ಲೂಕಿನ ಜಾನಪದ ಕಲಾವಿದ ನಾಗರಾಜ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಜಾನಪದ ಹಿನ್ನೆಲೆ ಗೋಷ್ಠಿಗಳು, ಜಾನಪದ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಜಿಲ್ಲೆಯ ಜಾನಪದ ತಜ್ಞರು ಪಾಲ್ಗೊಳ್ಳಲಿದ್ದಾರೆ’ ಎಂದರು.

ಕ್ಷೇತ್ರಫಾಲಯ್ಯ, ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಚಿಕ್ಕಲೂರು ಜಯಣ್ಣ, ಡಾ. ಮಾಳೇನಳ್ಳಿ ಬಸಪ್ಪ, ಗ್ರಾಮ ಪಂಚಾಯತಿ ಸದಸ್ಯ ಲೋಕನಾಥ, ಶಿಕ್ಷಕರಾದ ರಾಜಣ್ಣ, ಕಲಾವಿದ ಶಂಕ್ರಪ್ಪ, ರೇವಣ್ಣ, ತಿಪ್ಪೇಶ, ಶಿವಕುಮಾರ ಶ್ರೀನಿವಾಸ್, ಜಯಣ್ಣ ಹಾಗೂ ಸೋಮಶೇಖರ್, ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.