ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಳಸ ಸರ್ಕಾರಿ ಆಸ್ಪತ್ರೆ: ಡಯಾಲಿಸಿಸ್ ಘಟಕ ಆರಂಭ

Published : 6 ಆಗಸ್ಟ್ 2024, 14:34 IST
Last Updated : 6 ಆಗಸ್ಟ್ 2024, 14:34 IST
ಫಾಲೋ ಮಾಡಿ
Comments

ಕಳಸ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕವನ್ನು ಶಾಸಕಿ ನಯನಾ ಮೋಟಮ್ಮ ಮಂಗಳವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ‘ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದ್ದು, ದಿನಕ್ಕೆ 8 ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ನೀಡಬಹುದಾಗಿದೆ. ಖಾಸಗಿ ಸಂಸ್ಥೆಯೊಂದು ಘಟಕದ ನಿರ್ವಹಣೆ ಮಾಡಲಿದೆ’ ಎಂದರು. ಹಾಗೇ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿ ಅಗತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ವೈದ್ಯ ಡಾ.ಮಂಜುನಾಥ್ ಮಾತನಾಡಿ, ‘ಕಾಯಂ ವೈದ್ಯರು ಆಸ್ಪತ್ರೆಯಲ್ಲಿ ಇದ್ದರೆ ಇನ್ನಷ್ಟು ಆತ್ಮವಿಶ್ವಾಸದಿಂದ ಕೆಲಸ ಮಾಡಬಹುದು. ಮರಣೋತ್ತರ ಪರೀಕ್ಷೆ, ಹೆರಿಗೆ ಮಾಡಲಾರದೆ ಸಮಸ್ಯೆ ಆಗುತ್ತಿದೆ’ ಎಂದರು.

ಆರೋಗ್ಯ ಸಿಬ್ಬಂದಿ ಮಾತನಾಡಿ, ರೋಗಿಗಳಿಗೆ ತುರ್ತು ಸೇವೆ ನೀಡಲು ಇನ್ನಷ್ಟು ಆರೋಗ್ಯ ಸಹಾಯಕಿಯರು ಮತ್ತು ಫಾರ್ಮಾಸಿಸ್ಟ್ ಸಿಬ್ಬಂದಿ ನೇಮಕ ಆಗಬೇಕು ಎಂದರು. 

ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಮಾತನಾಡಿ, ‘ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕ ಮಾಡಿ ಅವರನ್ನೇ ಆಡಳಿತ ವೈದ್ಯಾಧಿಕಾರಿ ಮಾಡಿದರೆ ಆಸ್ಪತ್ರೆಯ ಆಡಳಿತ ಸುಸೂತ್ರವಾಗುತ್ತದೆ’ ಎಂದರು.

ಕಾಯಂ ವೈದ್ಯರ ನೇಮಕದ ಬಗ್ಗೆ ಕಳೆದ ಒಂದು ವರ್ಷದಿಂದ ಸತತ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕಳಸದಲ್ಲಿ ಕೆಲಸ ಮಾಡಲು ವೈದ್ಯರಿಗೆ ಆಸಕ್ತಿ ಇಲ್ಲ. ಆದರೂ ವೈದ್ಯರನ್ನು ಮತ್ತು ಅಗತ್ಯ ಸಿಬ್ಬಂದಿ ನೇಮಿಸುವ ಪ್ರಯತ್ನ ಸಾಗಿದೆ ಎಂದು ನಯನಾ ಮೋಟಮ್ಮ ಹೇಳಿದರು.

ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಸದಸ್ಯ ವೀರೇಂದ್ರ, ಮುಖಂಡರಾದ ಪ್ರಭಾಕರ್, ರಾಜೇಂದ್ರ, ರಫೀಕ್, ಶ್ರೇಣಿಕ, ವಿಶ್ವನಾಥ್, ಲಕ್ಷ್ಮಣಾಚಾರ್, ಕೆ.ಎಲ್.ವಾಸು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT