ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಸೆಳೆದ ಸಿಂಹ, ಚಿಂಪಾಂಜಿ!

ಸಡಗರ ಸಂಭ್ರಮದಿಂದ ನೆರವೇರಿದ ಕಳಸ ಉತ್ಸವ
Last Updated 8 ಫೆಬ್ರುವರಿ 2023, 7:15 IST
ಅಕ್ಷರ ಗಾತ್ರ

ಕಳಸ: ಪಟ್ಟಣದಲ್ಲಿ ಮಂಗಳವಾರ ಕಳಸ ಉತ್ಸವ ಸಡಗರದಿಂದ ನೆರವೇರಿತು.

ಶಾಸಕ ಎಂ.ಪಿ.ಕುಮಾರಸ್ವಾಮಿ ಕಳಸೇಶ್ವರ ದೇವಸ್ಥಾನದ ಬಳಿ ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಶಾಲಾ, ಕಾಲೇಜುಗಳು ಮತ್ತು ಸಂಘಟನೆಗಳ ವೈವಿಧ್ಯಮಯ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.
ಕರಾವಳಿಯಿಂದ ಕರೆಸಲಾಗಿದ್ದ ದೈತ್ಯಾಕಾರದ ಸಿಂಹ, ಅಂಕದ ಕೋಳಿ, ಚಿಂಪಾಂಜಿ ವೇಷಧಾರಿಗಳು ರಸ್ತೆಯ ಎರಡು ಬದಿ ನಿಂತಿದ್ದ ಮಕ್ಕಳನ್ನು ಸೆಳೆದರು.

ಕಳಸೇಶ್ವರ ಸ್ವಾಮಿ ಸ್ತಬ್ಧಚಿತ್ರದ ಮುಂದೆ ಶಾಸಕ ಕುಮಾರಸ್ವಾಮಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಕೆ.ಸಿ.ಧರಣೇಂದ್ರ, ಶ್ರೇಣಿಕ, ರಾಜೇಂದ್ರ ಹಿತ್ತಲಮಕ್ಕಿ, ಸಂತೋಷ್, ಶೇಷಗಿರಿ, ವೆಂಕಟಸುಬ್ಬಯ್ಯ, ಹೆಮ್ಮಕ್ಕಿ ಗಿರೀಶ್, ಪಂಚಾಯಿತಿ ಅಧ್ಯಕ್ಷರಾದ ಸುಜಯಾ, ವೃಷಭರಾಜ್, ರವಿ ಕುಮಾರ್, ವಿಶ್ವನಾಥ್, ಜಗದೀಶ್, ತಹಶೀಲ್ದಾರ್ ನಂದಕಿಶೋರ್, ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ್ ಇದ್ದರು.

ಹುಲಿ ವೇಷಧಾರಿಗಳು, ವಿವಿಧ ನೃತ್ಯಗಾರರು ಗಮನ ಸೆಳೆದರು. ಚೆಂಡೆ ವಾದನ ಮತ್ತು ವಾದ್ಯ ಸಂಗೀತದ ತಂಡಗಳು ಮೆರವಣಿಗೆಗೆ ಲಯಬದ್ಧವಾದ ಸಂಗೀತ ಒದಗಿಸಿದ್ದವು. ಐತಿಹಾಸಿಕ ವ್ಯಕ್ತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಿಗಳು ಸ್ತಬ್ಧಚಿತ್ರಗಳಲ್ಲಿ ಗಮನ ಸೆಳೆದರು.

ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗದಿಂದ ಕಂಗಾಲಾಗಿರುವ ಅಡಿಕೆ ಬೆಳೆಗಾರರ ಬವಣೆ ಚಿತ್ರಿಸುವ ಸ್ತಬ್ಧ ಚಿತ್ರ ವಿಶೇಷ ಆಕರ್ಷಣೆ ಆಗಿತ್ತು.
ಮೆರವಣಿಗೆಯು ಕೆಪಿಎಸ್ ಶಾಲಾ ಆವರಣದವರೆಗೂ ಸಾಗಿತು. ಅಲ್ಲಿ ಶಾಲಾ ಮಕ್ಕಳು ಮತ್ತು ಸ್ಥಳೀಯರು ನೃತ್ಯ, ಗಾಯನ ಮತ್ತಿತರ ಪ್ರದರ್ಶನ ನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹೊರನಾಡಿನ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಕಳಸದ ಧಾರ್ಮಿಕ ಪರಂಪರೆ, ಐತಿಹಾಸಿಕ ಮಹತ್ವ, ವನ್ಯಜೀವಿ ವೈವಿಧ್ಯ, ಪ್ರಾಕೃತಿಕ ಸೌಂದರ್ಯ, ಸಾಮಾಜಿಕ ವೈಶಿಷ್ಟ್ಯತೆ, ಕೃಷಿ ಪರಂಪರೆ ಬಗ್ಗೆ ಹೇಳಿದರು.
ಶಾಸಕ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ನಂದ ಕುಮಾರ್, ಉಪ ವಿಭಾಗಾಧಿಕಾರಿ ರಾಜೇಶ್, ವಲಯ ಅರಣ್ಯಾಧಿಕಾರಿ ಗಳಾದ ನಿಶ್ಚಿತ್, ಜ್ಯೋತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT