ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಕರ್ಕೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವವರಲ್ಲಿ ಬಹುತೇಕರು ಕಾರ್ಮಿಕರ ಮಕ್ಕಳು. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಪಡೆಯುತ್ತಿರುವುದೇ ಈ ಶಾಲೆಯ ಹೆಗ್ಗಳಿಕೆ.

ಶಿಕ್ಷಣ ಇಲಾಖೆ ನೀಡಿರುವ ₹80 ಲಕ್ಷ ಅನುದಾನದಲ್ಲಿ ಶಾಲೆಯಲ್ಲಿ ಐದು ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರೌಢಶಾಲೆಯ ಸುತ್ತಮುತ್ತ ಕಾಫಿ ಎಸ್ಟೇಟ್ಗಳಿದ್ದು, ಅಲ್ಲಿನ ಕಾರ್ಮಿಕರ ಮಕ್ಕಳೇ ಈ ಶಾಲೆ ವಿದ್ಯಾರ್ಥಿಗಳು. ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿರುವ ತರಗತಿಗಳಲ್ಲಿ 64 ವಿದ್ಯಾರ್ಥಿಗಳು ಇದ್ದಾರೆ. ದಾನಿಗಳ ನೆರವನ್ನು ಬಳಸಿ ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ, ಕಂಪ್ಯೂಟರ್, ಪ್ರಿಂಟರ್, ಯುಪಿಎಸ್, ಮೈಕ್ ಸಿಸ್ಟಂ, ಡೆಸ್ಕ್, ಶಾಲಾ ಆವರಣಕ್ಕೆ ಗೇಟ್, ಸೇರಿದಂತೆ ಬಹುತೇಕ ಅಗತ್ಯಗಳನ್ನು ಪೂರೈಸಿಕೊಳ್ಳಲಾಗಿದೆ.

ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುವ ಶಾಲೆಯು ನೋಡುಗರ ಗಮನ ಸೆಳೆಯುತ್ತದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್ಕ್ಲಾಸ್ ಮೂಲಕವೂ ಪಾಠ ನಡೆಯುತ್ತದೆ. ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಅವರನ್ನು ಪರೀಕ್ಷೆಗೆ ಅಣಿಗೊಳಿಸುತ್ತಾರೆ ಶಿಕ್ಷಕರು. 2023–24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 92 ಫಲಿತಾಂಶ ದೊರೆತಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈ ಶಾಲೆಗೆ ಪುಷ್ಟಿ ಕಾರ್ಯಕ್ರಮದಡಿ ಪ್ರಶಸ್ತಿ ದೊರೆತಿದೆ.

ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತ ಗಂಡು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಇಲ್ಲದ ಕಾರಣ ಶಾಲೆಯಲ್ಲಿರುವ ಕೊಠಡಿಗಳನ್ನು ಬಳಸಿಕೊಂಡು ಗಂಡು ಮಕ್ಕಳ ಹಾಸ್ಟಲ್ ವ್ಯವಸ್ಥೆ ಕಲ್ಪಿಸಿದಲ್ಲಿ ಪ್ರೌಢಶಾಲೆಯಲ್ಲಿ ದಾಖಲಾತಿ ಹೆಚ್ಚಲಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಚ್.ವಿ.ಸುರೇಶಪ್ಪ.

ಹಾಸ್ಟೆಲ್ ಬೇಡಿಕೆ’ ಶಿಕ್ಷಕರು ಮಕ್ಕಳಿಗೆ ಅರ್ಥವಾಗುವಂತೆ ಒಳ್ಳೆಯ ಪಾಠ ಮಾಡುತ್ತಾರೆ. ಶಿಕ್ಷಕರು ಹಬ್ಬಗಳ ಸಂದರ್ಭದಲ್ಲೂ ಮನೆಗೆ ಹೋಗದೆ ಮಕ್ಕಳ ಪಾಠದಲ್ಲಿ ತೊಡಗುತ್ತಾರೆ. ಪ್ರತಿ ತಿಂಗಳೂ ಶಿಕ್ಷಕರು ಎಸ್ಡಿಎಂಸಿ ಪೋಷಕರ ಸಭೆ ಕರೆದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಶಾಲೆಯ ಅಗತ್ಯಗಳ ವಿಚಾರ ವಿನಿಮಯ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ಹಾಸ್ಟೆಲ್ ಬೇಕು ಎನ್ನುವುದು ನಮ್ಮ ಬೇಡಿಕೆ. ಮಕ್ಕಳ ಸಂಖ್ಯೆ ಕುಸಿಯುತ್ತಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ಎಸ್ಸಿಎಂಸಿ ಅಧ್ಯಕ್ಷೆ ಶ್ರೀಮತಿ ರತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.