ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ನಾಯಕ ದೇಶದ ಅತ್ಯುತ್ತಮ ಆಸ್ತಿ

ರೋಟರಿ ಸಂಸ್ಥೆಯಿಂದ ಯುವ ನಾಯಕತ್ವ ತರಬೇತಿ ಕಾರ್ಯಗಾರ
Last Updated 8 ಸೆಪ್ಟೆಂಬರ್ 2022, 7:34 IST
ಅಕ್ಷರ ಗಾತ್ರ

ಮೂಡಿಗೆರೆ: ‘ಸಮರ್ಥ ನಾಯಕ ದೇಶದ ಅತ್ಯುತ್ತಮ ಆಸ್ತಿ’ ಎಂದು ಪರಿವರ್ತನಾ ಸಂಸ್ಥೆಯ ಚೇತನ್ ರಾಂ ಹೇಳಿದರು.

ಇಲ್ಲಿನ ಹ್ಯಾಂಡ್ ಪೋಸ್ಟಿನಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮೂಡಿಗೆರೆ, ಗೋಣಿಬೀಡು, ಅರೇಹಳ್ಳಿ, ಬೇಲೂರು, ಸಕಲೇಶಪುರದ ರೋಟರಿ ಸಂಸ್ಥೆಗಳ ಘಟಕಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಯುವ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂಜರಿಕೆ, ಕೀಳರಿಮೆಗಳು ನಾಯಕತ್ವದ ಶತ್ರುಗಳು. ಸಹನೆ, ತಾಳ್ಮೆ, ಸೃಜನಶೀಲತೆ, ಕ್ರಿಯಾತ್ಮಕತೆಯು ನಾಯಕತ್ವ ಗುಣದ ಬೆನ್ನೆಲುಬಾಗಿವೆ’ ಎಂದರು.

ರೋಟರಿ ಸಂಸ್ಥೆಯ ಡಿ.ಎಸ್. ರವಿ ಮಾತನಾಡಿ, ‘ಇಂದು ಉತ್ತಮ ನಾಯಕತ್ವದ ಕೊರತೆಯಿದ್ದು, ನಾಯಕತ್ವ ಗುಣವನ್ನು ಬೆಳೆಸುವುದು ಶಿಕ್ಷಣದ ಆಶಯಗಳಲ್ಲಿ ಒಂದಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಸುಮಾರು 200ಕ್ಕೂ ಅಧಿಕ ಯುವಕರು ಪಾಲ್ಗೊಂಡಿದ್ದರು.

ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ನಾರಾಯಣ ಎಸ್. ಮಾವರ್ಕರ್, ಡಾ. ಜಯಗೌರಿ ಹಾಡಿಗಲ್, ಜಿ.ಎ ನಂಜೇಗೌಡ, ಅಭಿನಂದನ್ ಎ ಶೆಟ್ಟಿ, ಬಿ.ಸಿ ಗೀತಾ, ಮಹಾಲಸ ಕಿಣಿ, ಶೈಲೇಂದ್ರ ರಾವ್, ಸಂದೇಶ್, ಬಿ.ಎಸ್ ಓಂಕಾರ್, ವಿನೋದದ್ ಕುಮಾರ್, ಗಣೇಶ್, ಮಹೇಶ್, ಶರತ್, ಮಹಿಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT