ಬಾಳೆಹೊನ್ನೂರು: ಸೋಮವಾರ ಮಧ್ಯಾಹ್ನ ಬಾಳೆಹೊನ್ನೂರು ಪಟ್ಟಣ, ಖಾಂಡ್ಯ, ಮಾಗುಂಡಿ ವ್ಯಾಪ್ತಿಯಲ್ಲಿ ತಳಭಾಗದಲ್ಲಿ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು ಕೆಲಹೊತ್ತು ಜನರಲ್ಲಿ ಆತಂಕ ಸೃಷ್ಟಿಸಿತ್ತು.

ದಿಢೀರ್ ಕಾಣಿಸಿಕೊಂಡ ಕ್ಯಾಪ್ಟರ್ ಭಾರಿ ಸದ್ದಿನೊಂದಿಗೆ ಎಲ್ಲಡೆ ಸಂಚರಿಸಿತು. ಕೆಲವರು ಇದು ಅರಣ್ಯ ಇಲಾಖೆ ಸರ್ವೇ ನಡೆಸಿದ್ದು ಎಂದರೆ, ಇನ್ನೂ ಕೆಲವರು ಬೇರೆಯದೇ ಉದ್ದೇಶಕ್ಕೆ ಬಂದಿದೆ ಎಂದು ಮಾತಾಡಿಕೊಂಡರು. ಯಾವ ಉದ್ದೇಶಕ್ಕೆ ಹಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇಲ್ಲ. ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಕಡಬಗೆರೆಯ ಚಂದ್ರಶೇಖರ್ ರೈ ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜೀತೆಂದ್ರ ಕುಮಾರ್ ದಯಾಮ್ ಅವರನ್ನು ಸಂಪರ್ಕಿಸಿದಾಗ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಅರಣ್ಯ ಇಲಾಖೆಯ ಎಸಿಎಫ್ ಮೋಹನ್ ಕುಮಾರ್, ಇದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಉತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.