ಕಳಸ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ (ಆ. 12) ಕಳಸ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಎ. ಶೇಷಗಿರಿ ಹೇಳಿದರು.
ಬೆಳಿಗ್ಗೆ 9.30ಕ್ಕೆ ನೆಲ್ಲಿಬೀಡು ಸಮುದಾಯ ಭವನದಲ್ಲಿ ಸ್ಥಳೀಯರೊಂದಿಗೆ ಸಂವಾದ ಕಾರ್ಯಕ್ರಮ, 10.45ಕ್ಕೆ ಸಂಸೆ ಗ್ರಾಮ ಪಂಚಾಯಿತಿ ಸಮುದಾಯ ಭವನಕ್ಕೆ ಭೇಟಿ, 11.45ಕ್ಕೆ ಕಳಸ ದುರ್ಗಾ ಮಂಟಪದಲ್ಲಿ ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಬಾಳೆಹೊಳೆ ಗ್ರಾಮ ಪಂಚಾಯಿತಿ, 2.30ಕ್ಕೆ ಹಿರೇಬೈಲ್ ಗ್ರಾಮ ಪಂಚಾಯಿತಿ ಮತ್ತು 3.30ಕ್ಕೆ ಮರಸಣಿಗೆ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.