ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ ವಿಧಾನಸಭೆ ಕ್ಷೇತ್ರ | ಎರಡು ದಶಕಗಳ ಬಳಿಕ ‘ಕೈ‘ ಹಿಡಿದ ಮತದಾರ

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮುಗಿಲು ಮುಟ್ಟಿದ ಸಂಭ್ರಮ
Published 13 ಮೇ 2023, 13:33 IST
Last Updated 13 ಮೇ 2023, 13:33 IST
ಅಕ್ಷರ ಗಾತ್ರ

ಮೂಡಿಗೆರೆ: ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಶಕಗಳ ಬಳಿಕ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದು ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಗೆಲುವಿನ ಲೆಕ್ಕಾಚಾರದಲ್ಲಿ ವಿಶ್ವಾಸ ಇದ್ದ ಕೈ ಪಾಳಯದ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಕಾಂಗ್ರೆಸ್ ಕಚೇರಿಯಲ್ಲಿ ಸೇರತೊಡಗಿದ್ದರು. ಬಹುತೇಕ ಮಂದಿ ಚಿಕ್ಕಮಗಳೂರಿನ ಮತ ಎಣಿಕೆ ಕೇಂದ್ರಕ್ಕೆ ತೆರಳಿದ್ದರೆ, ಕೆಲವರು ಪಕ್ಷದ ಕಚೇರಿಯಲ್ಲಿಯೇ ಉಳಿದು ಕ್ಷಣಕ್ಷಣದ ಮಾಹಿತಿಗಾಗಿ ಕಾಯತೊಡಗಿದ್ದರು. ಪ್ರಾರಂಭದಲ್ಲಿ ಬಿಜೆಪಿಯ ದೀಪಕ್ ದೊಡ್ಡಯ್ಯ ಮುನ್ನೆಡೆ ಸಾಧಿಸುತ್ತಿದ್ದಂತೆ ಕಳವಳಗೊಂಡ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದ್ದ ಮಾಹಿತಿಗಾಗಿ ತುದಿಗಾಲಿನಲ್ಲಿ ನಿಂತಿದ್ದರು. ಅಂತಿಮವಾಗಿ ನಯನಾ ಮೋಟಮ್ಮ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಚೇರಿಯ ಮುಂದೆ ಪಟಾಕಿ ಸಿಡಿಸಿ, ಡೋಲು ಬಾರಿಸಿ ಕುಣಿದು ಕುಪ್ಪಳಿಸಿದರು.

ಸಂಜೆಯ ವೇಳೆಗೆ ಗ್ರಾಮೀಣ ಭಾಗದಿಂದ ಪಕ್ಷದ ಕಚೇರಿಯತ್ತ ಬಂದ ಪಕ್ಷದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಹಿಸಿದ್ದರು. ಚಿಕ್ಕಮಗಳೂರಿನಿಂದ ಬಂದ ನಯನಾ ಮೋಟಮ್ಮ ಅವರಿಗೆ ಪಕ್ಷದ ಕಚೇರಿ ಮುಂಭಾಗದಲ್ಲಿ ಹೂವಿನ ಸುರಿಮಳೆ ಸುರಿದು ಸಂಭ್ರಮಿಸಿದರು. ಪಕ್ಷದ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

2004 ರ ಚುನಾವಣೆಯಲ್ಲಿ ಕೈ ತಪ್ಪಿದ್ದ ಕ್ಷೇತ್ರದಲ್ಲಿ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಈ ನಾಲ್ಕು ಚುನಾವಣೆಯಲ್ಲಿ ಎರಡು ಬಾರಿ ಮೋಟಮ್ಮ ಹಾಗೂ ಎರಡು ಬಾರಿ ಬಿ.ಎನ್ ಚಂದ್ರಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದರು. ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ ಪ್ರಯತ್ನದಲ್ಲಿಯೇ ಮಹಿಳೆಯೊಬ್ಬರು ಶಾಸಕ ಹುದ್ದೇಗೇರಿದ್ದು, ಕ್ಷೇತ್ರವನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ನ ನಯನಾ ಮೋಟಮ್ಮ ಅವರಿಂದ ಮರು ಅಧಿಕಾರ ಸಿಕ್ಕಂತಾಗಿದೆ.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶನಿವಾರ ಗೆಲುವು ಸಾಧಿಸಿದ ನಯನಮೋಟಮ್ಮ ಅವರನ್ನು ಪಕ್ಷದ ಮುಖಂಡರಾದ ಜಿ.ಎಚ್ ಹಾಲಪ್ಪಗೌಡ ಬಿ.ಬಿ ನಿಂಗಯ್ಯ ವಿನಯಕುಮಾರ್ ಅಭಿನಂದಿಸಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶನಿವಾರ ಗೆಲುವು ಸಾಧಿಸಿದ ನಯನಮೋಟಮ್ಮ ಅವರನ್ನು ಪಕ್ಷದ ಮುಖಂಡರಾದ ಜಿ.ಎಚ್ ಹಾಲಪ್ಪಗೌಡ ಬಿ.ಬಿ ನಿಂಗಯ್ಯ ವಿನಯಕುಮಾರ್ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT