ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ | ಜರಿದ ಹೆದ್ದಾರಿ; ಅಪಾಯದಲ್ಲಿ ಕಾರ್ಮಿಕರು

Last Updated 12 ಸೆಪ್ಟೆಂಬರ್ 2022, 5:20 IST
ಅಕ್ಷರ ಗಾತ್ರ

ಶೃಂಗೇರಿ: ಇಲ್ಲಿಂದ ಆಗುಂಬೆ ಮತ್ತು ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 27ರ ನೆರಳಕೊಡಿಗೆಯಲ್ಲಿ ಜರಿದಿದ್ದು, ಈ ಅಪಾಯಕಾರಿ ಸ್ಥಳದಲ್ಲಿ ಮಣ್ಣು ಪರೀಕ್ಷೆ ಮಾಡುವ ಕಾರ್ಮಿಕರು ಬೀಡುಬಿಟ್ಟಿದ್ದಾರೆ.

ಇಲ್ಲಿ ಸೇತುವೆ ನಿರ್ಮಿಸುವ ಸಲುವಾಗಿ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸಲು ಲೋಕೋಪಯೋಗಿ ಇಲಾಖೆಯು ಗುತ್ತಿಗೆದಾರರ ಮೂಲಕ ಕಾರ್ಮಿಕರನ್ನು ನಿಯೋಜಿಸಿದೆ. ಜೂನ್ 14ರ ರಾತ್ರಿ ಸುರಿದ ಭಾರಿ ಮಳೆಗೆ ನೆರಳಕೊಡಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ರಸ್ತೆ ಮತ್ತು ಗುಡ್ಡ ಜರಿದಿತ್ತು. ಈಗಲೂ ಗುಡ್ಡದ ಮೇಲಿನಿಂದ ತುಂಡು ತುಂಡಾಗಿ ಜರಿಯುತ್ತಿದೆ. ಸ್ಥಳದಲ್ಲಿ ಯಾರೂ ಓಡಾಡದಂತೆ ಪೊಲೀಸರು ಮತ್ತು ಜಿಲ್ಲಾಡಳಿತ ಬ್ಯಾರಿಕೇಡ್‍ಗಳನ್ನು ಹಾಕಿದ್ದಾರೆ. ಬೃಹತ್ ವಾಹನಗಳ ಸಂಚಾರ ನಿಷೇಧಿಸಿ, 10 ಅಡಿ ಎತ್ತರಕ್ಕೆ ಕಮಾನ್ ನಿರ್ಮಿಸಲಾಗಿದೆ. ಸಣ್ಣ ವಾಹನ ಓಡಾಡಲು ಹಳೆ ರಸ್ತೆಯ ಮೂಲಕ ಅವಕಾಶ ನೀಡಲಾಗಿದೆ.

ಆದರೆ ನಾಲ್ವರು ಕಾರ್ಮಿಕರು ಧರೆಯ ತುದಿಯಲ್ಲಿ ಶೆಡ್ ನಿರ್ಮಿಸಿ ಬೀಡುಬಿಟ್ಟಿದ್ದಾರೆ. 10 ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಧರೆ ಜರಿಯುವ ಅಪಾಯ ಕಾಡುತ್ತಿದೆ. ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಇದು ಅಪಾಯಕಾರಿ ಜಾಗ ಎಂದು ತಿಳಿದಿದ್ದರೂ, ಕಾರ್ಮಿಕರಿಗೆ ಸೂರಿನ ವ್ಯವಸ್ಥೆ ಮಾಡಿಲ್ಲ. ಮಣ್ಣು ಪರೀಕ್ಷೆ ಮಾಡುವವರು ಮಣ್ಣು ಪಾಲಾದರೆ ಯಾರು ಹೊಣೆ?’ ಎಂದು ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT