ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೃಂಗೇರಿ: ಶಾರದಾ ಪೀಠದಲ್ಲಿ 12 ದಿನ ಶರನ್ನವರಾತ್ರಿ ಮಹೋತ್ಸವ 

Published : 1 ಅಕ್ಟೋಬರ್ 2024, 13:06 IST
Last Updated : 1 ಅಕ್ಟೋಬರ್ 2024, 13:06 IST
ಫಾಲೋ ಮಾಡಿ
Comments

ಶೃಂಗೇರಿ: ಇಲ್ಲಿನ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.2ರಿಂದ ಅ.13ರವರೆಗೆ ನಡೆಯಲಿದೆ.

ಶಾರದೆಗೆ ವಿವಿಧ ಅಲಂಕಾರ: ಅ.2ರಂದು ಶಾರದಾಂಬಾ ಮಹಾಭಿಷೇಕ ನಡೆಯಲಿದ್ದು, ಶಾರದೆಗೆ ಜಗತ್ಪ್ರಸೂತಿಕಾ ಅಲಂಕಾರ ಮಾಡಲಾಗುವುದು. 3ರಂದು ಶಾರದಾ ಪ್ರತಿಷ್ಠೆ ಹಾಗೂ ಹಂಸವಹನಾ ಅಲಂಕಾರ, 4ರಂದು ಬ್ರಾಹ್ಮೀ ಅಲಂಕಾರ, 5ರಂದು ವೃಷಭವಾಹನ ಅಲಂಕಾರ, 6ರಂದು ಮಯೂರವಾಹನ ಅಲಂಕಾರ, 7ರಂದು ಗರುಡವಾಹನ ಅಲಂಕಾರ ಮತ್ತು ಶತಚಂಡೀಯಾಗದ ಸಂಕಲ್ಪ, ಪುರಶ್ಚರಣಾರಂಭ, 8ರಂದು ಮೋಹಿನೀ ಅಲಂಕಾರ, 9ರಂದು ಸರಸ್ವತಿಯ ವಾಹನೆ ಮತ್ತು ವೀಣಾಶಾರದಾ ಅಲಂಕಾರ, 10ರಂದು ರಾಜರಾಜೇಶ್ವರಿ ಅಲಂಕಾರ, 11ರಂದು ಮಹಾನವಮಿ, ಸಿಂಹವಾಹನಾಲಂಕಾರ, ಶತಚಂಡೀಯಾಗದ ಪೂರ್ಣಾಹುತಿ ಮತ್ತು ಗಜಾಶ್ವಪೂಜೆ, 12ರಂದು ವಿಜಯದಶಮಿ, ಗಜಲಕ್ಷ್ಮೀ ಅಲಂಕಾರ, ಬೆಳಿಗ್ಗೆ ಲಕ್ಷ್ಮೀನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣ, ಸಂಜೆ-ವಿಜಯೋತ್ಸವ ಮತ್ತು ಶಮೀಪೂಜೆ, 13ರಂದು ಗಜಲಕ್ಷ್ಮೀ ಅಲಂಕಾರ, ಶಾರದಾಂಬಾ ಮಹಾರಥೋತ್ಸವ, ಶಾರದಾ ಪೀಠದ ಉಭಯ ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.

ಪ್ರತಿ ದಿನ ಸಂಜೆ 6.30ಕ್ಕೆ ಶಾರದಾ ಮಠದ ಆವರಣದಲ್ಲಿರುವ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. 3ರಂದು ಶೃಂಗೇರಿ ಸಹೋದರಿಯರಿಂದ ಶಾಸ್ತ್ರೀಯ ಸಂಗೀತ, 4ರಂದು ಬೆಂಗಳೂರಿನ ಐಶ್ವರ್ಯ ಮಹೇಶ್ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ, 5ರಂದು ಚೆನ್ನೈನ ರಾಮನಾಥ ಭಾಗವತ್ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ, 6ರಂದು ಚೆನ್ನೈನ ಮಾಲಾ ಚಂದ್ರಶೇಖರ್ ಹಾಗೂ ಸಂಗಡಿಗರಿಂದ ಕೊಳಲುವಾದನ, ಅ.7ರಂದು ಬೆಂಗಳೂರಿನ ಆರ್.ಎನ್.ತ್ಯಾಗರಾಜನ್ ಮತ್ತು ಆರ್.ಎನ್.ತಾರಾನಾಥನ್ ಅವರಿಂದ ಶಾಸ್ತ್ರೀಯ ಸಂಗೀತ, 8ರಂದು ಕೇರಳದ ಶಂಕರನ್ ನಂಬೂದಿರಿ ಮತ್ತು ಸಂಗಡಿಗರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.

ಅ.9ರಂದು ಬೆಂಗಳೂರಿನ ಆರ್.ಕೆ.ಶಂಕರ್ ಹಾಗೂ ಸಂಗಡಿರಿಂದ ವೀಣಾವಾದನ, 10ರಂದು ಬೆಂಗಳೂರು ಜ್ಞಾನೋದಯ ಶಾಲಾ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, 11ರಂದು ಬೆಂಗಳೂರಿನ ವಾಗೀಶ್ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.

ಅ.13ರಂದು ರಥಬೀದಿಯಲ್ಲಿ ನವರಾತ್ರಿ ಉತ್ಸವದ ಸಲುವಾಗಿ ಮಹಾರಥೋತ್ಸವ, ದರ್ಬಾರು ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ 6 ಗಂಟೆಗೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಬೀದಿ ಉತ್ಸವ ನಡೆಯಲಿದೆ.

ಶರನ್ನವರಾತ್ರಿ ಪ್ರಯುಕ್ತ ಪ್ರತಿದಿನ ಶಾರದಾ ಮಠದಲ್ಲಿ ನಾಲ್ಕು ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವೀಭಾಗವತ, ದುರ್ಗಾಸಪ್ತಶತಿ, ವಾಲ್ಮೀಕಿ ರಾಮಾಯಣ, ಶ್ರೀಸೂಕ್ತ ಜಪ, ಭವನೇಶ್ವರಿ ಜಪ, ಚಂದ್ರಮೌಳೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶ್ರೀಚಕ್ರಕ್ಕೆ ನವಾಹರಣ ಪೂಜೆ, ಕುಮಾರೀ, ಸುಹಾಸಿನೀ ಪೂಜೆ ನೆರವೇರುತ್ತದೆ.

ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿಗಳಿಂದ ಶಾರದಾಂಬೆಗೆ ವಿಶೇಷ ಪೂಜೆ, ಸಂಜೆ ಶಾರದೆ ದೀಪೋತ್ಸವ, ಬೀದಿ ಉತ್ಸವ, ರಾತ್ರಿ ಶಾರದೆಯ ಸನ್ನಿಧಿಯಲ್ಲಿ ಬಂಗಾರದ ದಿಂಡೀ ಉತ್ಸವ, ವಿಧುಶೇಖರಭಾರತೀ ಸ್ವಾಮೀಜಿಗಳಿಂದ ದರ್ಬಾರು, ಮಹಾಮಂಗಳಾರತಿ, ಅಷ್ಟವಧಾನಸೇವೆ ನಡೆಯಲಿದೆ ಎಂದು ಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ತಿಳಿಸಿದ್ದಾರೆ.

ಶೃಂಗೇರಿಯಲ್ಲಿ 12 ದಿನಗಳ ಕಾಲ ನಡೆಯುವ ಶರನ್ನವರಾತ್ರಿ ಮಹೋತ್ಸಕ್ಕೆ ಸಜ್ಜಾಗಿರುವ ಶಾರದಾ ಪೀಠ
ಶೃಂಗೇರಿಯಲ್ಲಿ 12 ದಿನಗಳ ಕಾಲ ನಡೆಯುವ ಶರನ್ನವರಾತ್ರಿ ಮಹೋತ್ಸಕ್ಕೆ ಸಜ್ಜಾಗಿರುವ ಶಾರದಾ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT