ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯ ಜೀವನ ಶ್ರೇಷ್ಠವಾದುದು

ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ
Last Updated 25 ಅಕ್ಟೋಬರ್ 2020, 8:14 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ‘ಮನುಷ್ಯ ಜೀವನ ಶ್ರೇಷ್ಠವಾದುದು. ಮರೆಯು ವುದು ಮನುಷ್ಯನ ಸಹಜ ಸ್ವಭಾವ. ಸತ್ಕರ್ಮಗಳನ್ನು ಮತ್ತೆ ನೆನಪಿಸು ವುದು ಧರ್ಮ ಪೀಠಗಳ ಕರ್ತವ್ಯ. ಸೂರ್ಯೋದಯಕ್ಕೂ ಮುನ್ನ ದೈವ ಆರಾಧನೆ ಮಾಡುವುದು ಒಳ್ಳೆಯದು’ ಎಂದು ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ಪೀಠದಲ್ಲಿ 29ನೇ ವರ್ಷದ ಶರನ್ನವರಾತ್ರಿ ಆಚರಣೆಯ 8ನೇ ದಿನವಾದ ಶನಿವಾರ ಮಾತನಾಡಿದ ನೀಡಿದ ಅವರು, ‘ಪ್ರಕೃತಿಯಲ್ಲಿ ಪ್ರಾಣಿ ಪಕ್ಷಿಗಳು ಸಂತಸದಿಂದ ಇವೆ. ಆದರೆ ಮನುಷ್ಯ ನೆಮ್ಮದಿಯಿಂದ ಇಲ್ಲ. ಬೇಕು ಬೇಕೆಂಬ ಭಾವನೆ ದುಃಖ ತರುತ್ತದೆ. ಸಾಕು ಸಾಕು ಎನ್ನುವುದು ತೃಪ್ತಿ ತರುತ್ತದೆ. ದುರ್ವ್ಯಸನ ದುರ್ವ್ಯವಹಾರಗಳಿಗೆ ವ್ಯರ್ಥ ಕಾಲಹರಣ ಮಾಡಿ, ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಾನೆ. ಅರ್ಥ ಮತ್ತು ಅಧಿಕಾರದ ಬೆನ್ನು
ಹತ್ತಿದ ಮನುಷ್ಯನಿಗೆ ಧರ್ಮದ ಉದಾತ್ತವಾದ ಮೌಲ್ಯಗಳು ಕಣ್ಣಿಗೆ ಕಾಣುವುದಿಲ್ಲ, ಕಿವಿಗೆ ಕೇಳುವುದಿಲ್ಲ. ಅರಮನೆ ಇರಲಿ ಗುಡಿಸಲೇ ಇರಲಿ ದುಡಿಯುವವರ ಬದುಕು ವಿಕಾಸಗೊಂಡು ಪಲ್ಲವಿಸುತ್ತದೆ’ ಎಂದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಅವರು ಎಂ.ಶಿವಶಂಕರಯ್ಯ ರಚಿಸಿದ ‘ಶ್ರೀ ರಂಭಾಪುರಿ ಪೀಠದ ಸಾಂಸ್ಕೃತಿಕ ಅಧ್ಯಯನ’ ಕೃತಿ ಬಿಡುಗಡೆ ಮಾಡಿದರು.

ಯಸಳೂರು ತೆಂಕಲಗೋಡು ಬೃಹನ್ಮಠದ ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ, ಗುರುಪಾದಯ್ಯ ಸಾಲಿಮಠ ನಾಂದಿ, ಮೆಣಸುಕೂಡಿಗೆ ಪ್ರಸನ್ನಗೌಡ, ಸಿದ್ಧರಬೆಟ್ಟ ಕ್ಷೇತ್ರದ, ಸಂಗೊಳ್ಳಿ ಹಿರೇಮಠದ, ಬೇರುಗಂಡಿ ಬೃಹನ್ಮಠದ, ಸೂಡಿ ಜುಕ್ತಿ ಹಿರೇಮಠದ, ಜಕ್ಕಲಿ ಹಿರೇಮಠದ, ಕುಮಾರಪಟ್ಟಣ ಪುಣ್ಯಕೋಟಿಮಠದ ಸ್ವಾಮೀಜಿ, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ಬೆಳಗೊಳದ ಬಿ.ಎ. ಶಿವಶಂಕರ, ಶಿವಮೊಗ್ಗದ ಶಾಂತಾ ಆನಂದ, ಮಳಲಿ ನಾಗಭೂಷಣ ಶಿವಾಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT