ಚಿಕ್ಕಮಗಳೂರು: 13ನೇ ವಯಸ್ಸಿನಲ್ಲಿ ಪತ್ರಿಕೆ ವಿತರಣೆ ಕೆಲಸ ಆರಂಭಿಸಿ ಆ ವೃತ್ತಿಯಿಂದಲೇ ಬದುಕು ಕಟ್ಟಿ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಚಿಕ್ಕಮಗಳೂರಿನ ಎಂ.ಎಸ್.ಶ್ರೀಧರ್ ಮೋಹನ್.

ಶಾಲೆಗೆ ಹೋಗುವ ಸಂದರ್ಭದಲ್ಲಿ ಪಠ್ಯ ಪುಸ್ತಕಗಳಿಗೆ, ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ ಎಂದು 8ನೇ ತರಗತಿಯಲ್ಲಿ ಇರುವಾಗಲೇ ಪತ್ರಿಕೆ ವಿತರಣೆ ಕಾರ್ಯವನ್ನು ಶ್ರೀಧರ್ ಮೋಹನ್ ಆರಂಭಿಸಿದರು. ‘ಪ್ರಜಾವಾಣಿ’ ಪತ್ರಿಕಾ ಏಜೆಂಟರಾಗಿ, ವಿತರಕರಾಗಿ 53 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಚಿಕ್ಕಮಗಳೂರಿನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜಯಲಕ್ಷ್ಮಿ ಮತ್ತು ಶ್ರೀನಿವಾಸ್ ದಂಪತಿಗಳ 4ನೇ ಪುತ್ರನಾಗಿ ಜನಿಸಿ ಪತ್ರಿಕಾ ವಿತರಣೆಯಿಂದಲೇ ಜೀವನ ಕಟ್ಟಿಕೊಂಡರು. ಪತ್ರಿಕೆ ಹಂಚುವ ಮೂಲಕ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ ಪದವೀಧರರಾದರು.

1986ರಲ್ಲಿ ಮೊದಲಿಗೆ ಕೇವಲ 30 ಪತ್ರಿಕೆಗಳನ್ನು ಪಡೆದು ಏಜೆನ್ಸಿ ಆರಂಭಿಸಿದರು. ಸತತ ಪರಿಶ್ರಮದಿಂದ ಚಿಕ್ಕಮಗಳೂರಿನ ಸುತ್ತಮುತ್ತ ಸುಮಾರು 10-12 ಕಿಲೋ ಮೀಟರ್ನಲ್ಲಿ, ಕುಗ್ರಾಮದಲ್ಲೂ ಸಹ ಪತ್ರಿಕೆ ಸಿಗುವಂತೆ ಮಾಡಿದರು. ಒಂದೇ ವರ್ಷದಲ್ಲಿ 4,500 ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡಿದರು. 100 ಪತ್ರಿಕೆ ವಿತರಣೆ ಮಾಡಿದರೆ ತಿಂಗಳಿಗೆ ₹25 ಸಂಬಳ ಸಿಗುತ್ತಿತ್ತು.

ಪತ್ರಿಕೆ ವಿತರಣೆಯಿಂದಲೇ ಸ್ವಂತ ಮನೆ, ನಗರದ ಹೃದಯ ಭಾಗದಲ್ಲಿ ವಿತರಣ ಕಚೇರಿ ಆರಂಭಿಸಿದರು. ಇಬ್ಬರು ಹೆಣ್ಣು ಮಕ್ಕಳು ಮತ್ತು ಅಣ್ಣನ ಮಗನಿಗೂ ಸೇರಿ ಮೂವರನ್ನು ಎಂಜಿನಿಯರ್ ಮಾಡಿಸಿದ್ದಾರೆ.

ಪ್ರತಿದಿನವೂ ಬೆಳಿಗ್ಗೆ 3.30ಕ್ಕೆ ನಿದ್ರೆಯಿಂದ ಮೇಲೆದ್ದು 4 ಗಂಟೆಗೆ ಕೆಲಸಕ್ಕೆ ಹಾಜರಾಗುವುದು ಇವರ ಅಭ್ಯಾಸ. ಮಳೆ ಮತ್ತು ಚಳಿಯನ್ನು ಲೆಕ್ಕಿಸದೆ ಪತ್ರಿಕೆಗಳನ್ನು ತಲುಪಿಸುವ ಕೆಲಸವನ್ನು ಶ್ರೀಧರ್ ಮೋಹನ್ ಇಂದಿಗೂ ಮಾಡುತ್ತಿದ್ದಾರೆ. ತಮ್ಮ 67 ವರ್ಷ ವಯಸ್ಸಿನಲ್ಲಿಯೂ ವೃತ್ತಿ ಮುಂದುವರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಇವರೊಂದಿಗೆ ಪತ್ನಿ ಸಹ ಬೆಳಿಗ್ಗೆ 4ಗಂಟೆಗೆ ಬಸ್ ನಿಲ್ದಾಣದ ಪುಸ್ತಕದ ಅಂಗಡಿಯಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡಿ ಪತಿಗೆ ನೆರವಾಗಿದ್ದರು.

ಪತ್ರಿಕಾ ಏಜೆಂಟರಾದ ಬಳಿಕ 40 ಜನರಿಗೆ ಪತ್ರಿಕೆ ಹಂಚುವ ಕೆಲಸ ಕೊಟ್ಟರು. ಪತ್ರಿಕೆ ವಿತರಣೆ ಕೆಲಸ ಕೀಳಲ್ಲ. ನಮ್ಮ ಭಾವನೆಗಳಿಗೆ ಬೆಲೆ ಇದೆ ಎಂಬುದನ್ನು ತೋರಿಸಿಕೊಟ್ಟರು. ಇವರ ಜತೆಯಲ್ಲಿ ಹಲವು ವರ್ಷ ಪತ್ರಿಕೆ ವಿತರಣೆ ಮಾಡಿದ ಒಬ್ಬರು ನ್ಯಾಯಾಧೀಶರಾಗಿ ಮತ್ತು ಹಲವರು ವಕೀಲರು, ಶಿಕ್ಷಕರು, ಎಲ್.ಐ.ಸಿ, ವಿದೇಶಗಳಲ್ಲಿ ಉದ್ಯೋಗ ಪಡೆದವರೂ ಇದ್ದಾರೆ. ಅವರೆಲ್ಲರೂ ಈಗಲೂ ಶ್ರೀಧರ್ ಮೋಹನ್ ಅವರನ್ನು ನೆನಪಿಸಿಕೊಳ್ಳುತ್ತಾರೆ.

ಇದರ ನಡುವೆ ಕೆಲ ದಿನಗಳ ಕಾಲ ವಾರ ಪತ್ರಿಕೆಯೊಂದಕ್ಕೆ ವರದಿಗಾರರಾಗಿಯೂ ಶ್ರೀಧರ್ ಮೋಹನ್ ಕೆಲಸ ಮಾಡಿದ್ದರು. ಉತ್ತಮ ವರದಿಗಾರಿಕೆಯಿಂದ ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅವರಿಂದ ಪ್ರಶಸ್ತಿ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಪತ್ರಕರ್ತರ ಸಂಘದಲ್ಲೂ ಕೆಲಸ ಮಾಡಿದರು. ಸವಿತಾ ಸೇವಾ ಟ್ರಸ್ಟ್ ಹೆಸರಿನಲ್ಲಿ 25 ವರ್ಷಗಳಿಂದ ಪ್ರತಿ ವರ್ಷ 100ರಿಂದ 200 ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಮತ್ತು ಹಣಕಾಸಿನ ನೆರವು ನೀಡುತ್ತಿದ್ದಾರೆ. ಅಂಧ ಮಕ್ಕಳ ಶಾಲೆ, ಗ್ರಾಮೀಣ ಗ್ರಂಥಾಲಯಗಳಿಗೆ ಉಚಿತವಾಗಿ ಪತ್ರಿಕೆಗಳನ್ನು ನೀಡುತ್ತಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ವರ್ಷದ ಆರು ತಿಂಗಳು ಮಳೆ ಮತ್ತು ಬಿರುಗಾಳಿಯಿಂದ ಕೂಡಿರಲಿದೆ. ಪತ್ರಿಕೆ ವಿಂಗಡಣೆ ಮಾಡಿಕೊಂಡು ಹಂಚಲು 50ಕ್ಕೂ ಹೆಚ್ಚು ವಿತರಕರಿಗೆ ತೊಂದರೆಯಾಗಿದೆ. ನಗರಸಭೆ ಮತ್ತು ಶಾಸಕರು ಗಮನ ಹರಿಸಿ ಹನುಮಂತಪ್ಪ ವೃತ್ತದಲ್ಲಿ ಶಾಶ್ವತ ಪತ್ರಿಕಾ ವಿತರಣಾ ಕೇಂದ್ರ ಮಾಡಿಕೊಡಬೇಕು. ಎಲ್ಲಾ ಬಸ್ ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ಪುಸ್ತಕದ ಮಳಿಗೆ ನಿರ್ಮಾಣ ಮಾಡಿಕೊಡಬೇಕು ಎಂಬುದು ಶ್ರೀಧರ್ ಮೋಹನ್ ಅವರ ಮನವಿ.

Cut-off box - 30 ವರ್ಷಗಳ ಪತ್ರಿಕಾ ವಿತರಕ ಚಿಕ್ಕಮಗಳೂರು: ನಗರದ ವಿಜಯಪುರದ ‘ಪ್ರಜಾವಾಣಿ’ ಪತ್ರಿಕೆ ಏಜೆಂಟರಾಗಿರುವ ನಂಜುಂಡ ಅವರು 30ಕ್ಕೂ ಹೆಚ್ಚು ವರ್ಷಗಳಿಂದ ಪತ್ರಿಕಾ ವಿತರಕರ ಕೆಲಸ ಮಾಡುತ್ತಿದ್ದಾರೆ. ಮಳೆ ಇರಲಿ ಚಳಿ ಇರಲಿ ಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಕಾಯಕವನ್ನು ಅವರು ನಿಲ್ಲಿಸಿಲ್ಲ. ನಿರಂತರವಾಗಿ ಪತ್ರಿಕಾ ವಿತರಕರ ಕಾಯಕ ಮುಂದುವರಿಸಿದ್ದಾರೆ. ‘ಕೋವಿಡ್ ಬಳಿಕ ಪತ್ರಿಕಾ ವಿತರಕರ ಜೀವನ ಕಷ್ಟವಾಗಿದೆ. ನಮ್ಮ ಕಡೆಗೂ ಗಮನ ಹರಿಸಬೇಕು’ ಎಂಬುದು ಅವರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.