ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಕಾಡುಹಂದಿ ಕಳೆಬರ ಪತ್ತೆ

ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯ
Last Updated 23 ಏಪ್ರಿಲ್ 2020, 16:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಅಭಯಾರಣ್ಯದ ಹಿನ್ನೀರು ಪ್ರದೇಶದಲ್ಲಿ ಗುರುವಾರ ಮತ್ತೊಂದು ಕಾಡುಹಂದಿ ಕಳೆಬರ ಪತ್ತೆಯಾಗಿದೆ. ಈವರೆಗೆ ಪತ್ತೆಯಾದ ಕಳೆಬರಗಳ ಸಂಖ್ಯೆ 14ಕ್ಕೆ ಏರಿದೆ.

ಭದ್ರಾ ಹಿನ್ನೀರು ಪ್ರದೇಶದ ಮಾವಿನಹಳ್ಳ ಪ್ರದೇಶದಲ್ಲಿ ಕಳೆಬರ ಸಿಕ್ಕಿದೆ. ಸಂಜೆ ಗಸ್ತಿನಲ್ಲಿದ್ದ ಕಳೆಬರ ಕಾಣಿಸಿದೆ.

‘ಕಳೆಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದು ಸತ್ತು ನಾಲ್ಕೈದು ದಿನಗಳಾಗಿರಬಹುದು’ ಎಂದು ಅರಣ್ಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವೈರಾಣು ದೃಢಪಟ್ಟಿಲ್ಲ: ‘ಭದ್ರಾ ಅಭಯಾರಣ್ಯಲ್ಲಿ ಇದೇ 2ರಂದು ಸಂಗ್ರಹಿಸಿದ್ದ ಮಾದರಿಯ ಪರೀಕ್ಷೆ ವರದಿ ಕೈಸೇರಿದೆ. ವೈರಾಣು ತಗುಲಿರುವುದು ದೃಢಪಟ್ಟಿಲ್ಲ’ ಎಂದು ಭದ್ರಾ ಹುಲಿ ಯೋಜನೆ ನಿರ್ದೇಶಕ ಎಸ್‌.ಧನಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಇನ್ನು ಎರಡು ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ. ಶಿವಮೊಗ್ಗದ ಪಶು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲೂ ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ಬ್ಯಾಕ್ಟಿರಿಯಾ ತಗುಲಿರಬಹುದೇ ಎಂಬ ಬಗ್ಗೆಯೂ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಹಿರಿಯ ಪಶುವೈದ್ಯಾಧಿಕಾರಿ ಡಾ.ಎಸ್‌.ವಿನಯ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT