ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ | ಆನ್‌ಲೈನ್‌ ವಂಚನೆ: ₹2.25 ಲಕ್ಷ ಕಳೆದುಕೊಂಡ ಮಹಿಳೆ

Published 14 ಏಪ್ರಿಲ್ 2024, 14:22 IST
Last Updated 14 ಏಪ್ರಿಲ್ 2024, 14:22 IST
ಅಕ್ಷರ ಗಾತ್ರ

ಕೊಪ್ಪ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಆನ್‌ಲೈನ್‌ ವಂಚನೆಗೆ ಒಳಗಾಗಿ ಬ್ಯಾಂಕ್ ಖಾತೆಯಲ್ಲಿದ್ದ ₹3.25 ಲಕ್ಷ ಮೊತ್ತ ಕಳೆದುಕೊಂಡಿರುವ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ತಮ್ಮ ಬ್ಯಾಂಕ್ ಖಾತೆಯಿಂದ ಏ.11 ರಂದು ₹ 50 ಸಾವಿರದಂತೆ 4 ಬಾರಿ ಹಾಗೂ ಒಂದು ಬಾರಿ ₹ 25 ಸಾವಿರ ಕಡಿತವಾಗಿದ್ದು, ಮೊಬೈಲ್‌ ಫೋನ್ ಹ್ಯಾಕ್ ಆಗಿದೆ ಎಂದು ಮಹಿಳೆಯೊಬ್ಬರು ಸೈಬರ್ ಕ್ರೈಮ್ ಘಟಕಕ್ಕೆ ಸಹಾಯವಾಣಿ ಮೂಲಕ ದೂರು ದಾಖಲಿಸಿದ್ದಾರೆ. ಕೊಪ್ಪ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.

ಏ.9 ರಂದು ಇನ್ನೊಂದು ಪ್ರಕರಣದಲ್ಲಿ, ವ್ಯಕ್ತಿಯೊಬ್ಬರು ತಮ್ಮ ವಾಟ್ಸಾಪ್ ಅನ್‌ ಇನ್‌ಸ್ಟಾಲ್‌ ಆಗಿದೆ ಎಂದು ಮತ್ತೆ ಇನ್‌ಸ್ಟಾಲ್‌ ಮಾಡಲು ಹೋದಾಗ ಒಟಿಪಿ ನಂಬರ್‌ಗೆ ಒಪ್ಪಿಗೆ ಸೂಚಿಸಿದ್ದರು. ಒಟಿಪಿ ಸಂಖ್ಯೆ ವ್ಯಕ್ತಿ ಮೊಬೈಲ್‌ಗೆ ಬರಲಿಲ್ಲ, ಅನುಮಾನಗೊಂಡು ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ₹1 ಲಕ್ಷ ವರ್ಗಾವಣೆಯಾಗಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT