ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಹಿನ್ನೀರು ಪ್ರದೇಶದಲ್ಲೂ ಭತ್ತ ಕೃಷಿ

ಕುಚಲಕ್ಕಿಗೆ ಬಳಕೆಯಾಗುವ ಜ್ಯೋತಿ ತಳಿಗೆ ಹೆಚ್ಚು ಬೇಡಿಕೆ
ಕೆ.ವಿ.ನಾಗರಾಜ್
Published 14 ಫೆಬ್ರುವರಿ 2024, 6:48 IST
Last Updated 14 ಫೆಬ್ರುವರಿ 2024, 6:48 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಭತ್ತದ ಧಾರಣೆ ಚೇತರಿಕೆ ಹಾದಿಯಲ್ಲಿರುವುದರಿಂದ ತಾಲ್ಲೂಕಿನ ರೈತರು ಭದ್ರಾ ಹಿನ್ನೀರಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಬೇಸಿಗೆಯಲ್ಲಿ ಭತ್ತವನ್ನು ಎರಡನೆಯ ಹಂಗಾಮು ಬೆಳೆಯಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ. ಬೇಗನೆ ಕಟಾವಿಗೆ ಬರುವ ತಳಿಗಳಾದ ಜ್ಯೋತಿ, ಸೋನಾ ಇತ್ಯಾದಿ ತಳಿಯ ಭತ್ತ ನಾಟಿ ಮಾಡಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ₹2,800 ರಿಂದ₹ 3ಸಾವಿರ ಅಸುಪಾಸಿನಲ್ಲಿದೆ. ದಪ್ಪ ಭತ್ತ ಜ್ಯೋತಿಗೆ ಕ್ವಿಂಟಾಲ್‌ಗೆ ₹2,400 ದರ ಇದೆ. ಅಕ್ಕಿ ಬೆಲೆಯೂ ಸರಾಸರಿ ₹55 ರಿಂದ ₹60ರಷ್ಟಿದೆ. ಮೊದಲನೇ ಹಂತದ ಬೆಳೆಗೆ ಮಳೆಯ ಕೊರತೆ ಸಮಸ್ಯೆ ಹಾಗೂ ಎರಡನೇ ಬೆಳೆಗೆ ನೀರು ಮತ್ತು ವಿದ್ಯುತ್ ಸಮಸ್ಯೆ ಕಾಡುವ ಸಾಧ್ಯತೆಯಿದೆ.

ಪ್ರತಿ ವರ್ಷವೂ ಭದ್ರಾಹಿನ್ನೀರಿನ ಪ್ರದೇಶದಲ್ಲಿ ಭತ್ತ ಬೆಳೆಯುವುದು ಸಾಮಾನ್ಯ. ಜ್ಯೋತಿ ಭತ್ತಕ್ಕೆ ಹೆಚ್ಚು ಬೇಡಿಕೆಯಿದೆ. ಕುಚಲಕ್ಕಿಗೆ ಬಳಕೆಯಾಗುವ ಇದಕ್ಕೆ ಕೇರಳ, ಉಡುಪಿ, ದಕ್ಷಿಣಕನ್ನಡ ಜಿಲ್ಲೆ ಮತ್ತಿತರ ಭಾಗದಲ್ಲಿ ಬೇಡಿಕೆಯಿದೆ. ಭದ್ರಾಹಿನ್ನೀರಿನ ಪ್ರದೇಶದ ಸಮೀಪದ ರೈತರ ಕೊಳವೆಬಾವಿಯ ನೀರನ್ನು ನಂಬಿಕೊಂಡು ಭತ್ತ ಬಿತ್ತನೆ ಮಾಡಿದ್ದಾರೆ. ಕಾಡಾನೆಗಳ ಹಾವಳಿ ಹೆಚ್ಚಾಗಿರುವುದರಿಂದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲು ಎನ್ನುತ್ತಾರೆ ಕೃಷಿಕ ತೋಟಗೆರೆ ಗ್ರಾಮದ ರಘು ಶೆಟ್ಟಿ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಸುಮಾರು 40ರಿಂದ 50 ಹೆಕ್ಟೇರ್ ಪ್ರದೇಶಲ್ಲಿ ಭತ್ತ ಬೆಳೆಯಲಾಗುತ್ತದೆ. ಇದುವರೆಗೆ 20 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಪೂರ್ಣಗೊಂಡಿದೆ. ಭದ್ರಾಹಿನ್ನೀರು ಪ್ರದೇಶದಲ್ಲಿ ಬೆಳೆ ಅಧಿಕೃತವಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ಅಭಿಪ್ರಾಯಪಟ್ಟರು.

‘ಕೇರಳ ರಾಜ್ಯದಲ್ಲಿ ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸುವುದಕ್ಕೆ ನಿಷೇಧವಿರುವುದರಿಂದ ಭತ್ತದ ಬೆಳೆಗಾರರಿಗೆ ಪ್ರೋತ್ಸಾಹ ಸಿಗುತ್ತಿದೆ. ರಾಜ್ಯದಲ್ಲಿ ಇಂತಹ ಮುಂಜಾಗ್ರತಾ ಕ್ರಮಗಳು ಇಲ್ಲದಿರುವುದು ವಿಷಾದದ ಸಂಗತಿ’ ಎನ್ನುತ್ತಾರೆ ರೈತರೊಬ್ಬರು.

ನರಸಿಂಹರಾಜಪುರದ ಭದ್ರಾಹಿನ್ನೀರು ಪ್ರದೇಶದಲ್ಲಿ ಭತ್ತ ಬೆಳೆಗೆ ನಾಟಿ ಮಾಡಿರುವುದು
ನರಸಿಂಹರಾಜಪುರದ ಭದ್ರಾಹಿನ್ನೀರು ಪ್ರದೇಶದಲ್ಲಿ ಭತ್ತ ಬೆಳೆಗೆ ನಾಟಿ ಮಾಡಿರುವುದು

ಭತ್ತ ಮಲೆನಾಡಿನ ಪ್ರಮುಖವಾದ ಆಹಾರ ಬೆಳೆ, ಆದರೆ ಭತ್ತ ಬೆಳೆಯಲು ರೈತರಿಗೆ ನೊರೆಂಟು ಸವಾಲುಗಳು. ಗೊಬ್ಬರ, ಬಿತ್ತನೆ ಬೀಜ, ನೀರಾವರಿ ಸಮಸ್ಯೆ, ಕೂಲಿಕಾರ್ಮಿಕರ ಸಮಸ್ಯೆ, ಕೂಲಿದರ ಹೆಚ್ಚಳ. ಮುಂತಾದ ವುಗಳನ್ನು ಎದುರಿಸಿ ಭತ್ತ ಬೆಳೆದರೆ ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲ. ಸರ್ಕಾರದ ನೀತಿಗಳು ರೈತರ ಪರವಾಗಿಲ್ಲ. ಈ ಬಾರಿ ಅಕ್ಕಿಗೆ ಬಂಗಾರದ ಬೆಲೆ ಬಂದಿದೆ. ಜತೆಗೆ ಭತ್ತಕ್ಕೂ ಸ್ವಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ. ಯಾರಿಗೂ ಸಿಗಬೇಕಾದ ಲಾಭ ಇನ್ನಾರದ್ದೋ ಪಾಲಾಗುತ್ತಿದೆ. ನರಸಿಂಹರಾಜಪುರದಲ್ಲಿ ಈ ಹಿಂದೆ ಯತೇಚ್ಛವಾಗಿ ಭತ್ತ ಬೆಳೆಯಲಾಗುತ್ತಿತ್ತು. ಆನಂತರದಲ್ಲಿ ಹಲವಾರು ಕಾರಣಗ ಳಿಂದ ಭತ್ತದ ಕಡೆ ರೈತರು ಆಕರ್ಷಿತರಾಗಿರಲಿಲ್ಲ. ನಷ್ಟಕ್ಕೊಳಗಾಗಿದ್ದ ರೈತರರು ಪ್ರಸ್ತುತ ಭತ್ತಕ್ಕೆ ಹೆಚ್ಚುತ್ತಿರುವ ಬೆಲೆ ಯಿಂದ ಪ್ರೇರಿತರಾಗಿ ಭತ್ತ ಬೆಳೆಯಲು ಮುಂದಾಗಿದ್ದಾರೆ. ಪ್ರಮುಖವಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT