ತರೀಕೆರೆ | ಸಿಗದ ನಿವೇಶನ: ಶೆಡ್‌ನಲ್ಲೇ ವಾಸ

ತರೀಕೆರೆ: ಪಟ್ಟಣದ ವಾರ್ಡ್ 23 ಮೂಲಸೌಕರ್ಯಗಳ ಕೊರತೆಯ ಆಗರವಾಗಿದೆ. ವಾರ್ಡ್‌ನ ಚೌಡೇಶ್ವರಿ, ಬಾಪೂಜಿ ಕಾಲೊನಿಯಲ್ಲಿ ಸ್ವಚ್ಛತೆಯೂ ಮರೀಚಿಕೆಯಾಗಿದೆ.
ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಹಕ್ಕುಪತ್ರ, ವಸತಿ ಸಮಸ್ಯೆಗಳೂ ಬಗೆಹರಿದಿಲ್ಲ. ಕಂಬದ ಬೀದಿ, ಬಿಳಿಮಗ್ಗದ ಬೀದಿಯ ರಸ್ತೆಗಳಿಗೆ ನಾಮಫಲಕಗಳೂ ಇಲ್ಲ. ವಾರ್ಡ್ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಪರಿಶಿಷ್ಟ ಸಮುದಾಯದ ಕುಟುಂಬಗಳಿದ್ದು, ಅವರಿಗೆ ವಸತಿ ಸೌಲಭ್ಯಗಳಿಲ್ಲ. ದೇವಾಲಯ ಆವರಣದಲ್ಲಿರುವ ಈ ಕುಟುಂಬಗಳಿಗೆ ಸೂರಿನ ಭಾಗ್ಯ ಲಭಿಸಿಲ್ಲ. ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ.
ಶೆಡ್ ಸುತ್ತ ಗಿಡಗಂಟಿಗಳು ಬೆಳೆದಿದ್ದು, ಹಂದಿ, ಕೀಟ, ಸೂಳ್ಳೆ ಕಾಟ ಹೇಳತೀರದಾಗಿದೆ. ಎಲ್ಲರೂ ಆತಂಕದಿಂದ ಜೀವನ ನಡೆಸುವಂತಾಗಿದೆ. ನಿವೇಶನದ ಹಕ್ಕುಪತ್ರ ಪತ್ರ ಸಿಗದ ಕಾರಣ ಗುಡಿಸನಲ್ಲಿ ವಾಸಿಸುತ್ತಿದ್ದೆವೆ ಎನ್ನುತ್ತಾರೆ ನಿವಾಸಿ ಚಂದ್ರಮ್ಮ.
ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತದೆ. ಆದರೆ, ಇಲ್ಲಿನ ಕೊಳವೆ ಬಾವಿಗೆ ಪಂಪ್ ಅಳವಡಿಸಬೇಕಾಗಿದೆ. ಚರಂಡಿಗಳಲ್ಲಿ ಕೊಳಚೆ ತುಂಬಿದ್ದು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರಿದ್ದಾರೆ. ಕೆಲವು ಕಡೆ ಚರಂಡಿಗೆ ಸ್ಲ್ಯಾಬ್ ಹಾಕಿಲ್ಲ. ಇದರಿಂದ ಓಡಾಟಕ್ಕೆ ತೂಂದರೆಯಾಗಿದೆ. ಸಮಸ್ಯೆಗಳನ್ನು ಸರಿಪಡಿಸದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಮಾಡಬೇಕಾಗುತ್ತದೆ ಎನ್ನುತ್ತಾರೆ ಕಂಬದ ಬೀದಿಯ ಟಿ.ಜಿ.ರಾಜು.
ಪರಿಶಿಷ್ಟ ಕುಟುಂಬಗಳು ಹೆಚ್ಚಾಗಿದ್ದು, ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಬೇಕು ಎಂಬುದು ಸ್ಥಳೀಯರ ಬೇಡಿಕೆ. 2018ರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿತ್ತು. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ತಳಪಾಯಕ್ಕೆಷ್ಟೆ ಸಿಮೀತವಾಗಿದೆ. ಜನಪ್ರತಿನಿಧಿಗಳು ಸಮುದಾಯ ಭವನದ ಬಗ್ಗೆ ಗಮನ ಹರಿಸಿಲ್ಲ. ಭವನದ ನಿವೇಶನದಲ್ಲಿ ಜಾಲಿಗಿಡ ಬೆಳೆದು ನಿಂತಿವೆ. ಈ ಆವರಣವು ಹಂದಿಗಳ ವಾಸಸ್ಥಾನವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.