ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವಾದ: ಕೋವಿಡ್ ಸೋಂಕಿತ ಅಣ್ಣನನ್ನು ಕೊಚ್ಚಿ ಕೊಂದ ತಮ್ಮ

Last Updated 16 ಮೇ 2021, 10:28 IST
ಅಕ್ಷರ ಗಾತ್ರ

ಕಳಸ: ಕೋವಿಡ್-19ನಿಂದಬಳಲುತ್ತಿದ್ದ ಅಣ್ಣನನ್ನುಸ್ವಂತ ತಮ್ಮನೇ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮರಸಣಿಗೆ ಗ್ರಾಮದಲ್ಲಿ ಶನಿವಾರ ರಾತ್ರಿ ಹತ್ಯೆ ಮಾಡಿರುವುದು ವರದಿಯಾಗಿದೆ.

ಇಲ್ಲಿನ ಕಂಬಳಗದ್ದೆಯ ಚಂದ್ರಮತಿ ಮತ್ತು ಅನಂತರಾಜಯ್ಯ ದಂಪತಿಗಳ ಪುತ್ರ ಮಹಾವೀರ (45) ಕೊಲೆಯಾದವರು. ಮಹಾವೀರ ಇಲ್ಲಿನ ಇಡಿಕಿಣಿ ಕೃಷಿ ಮತ್ತು ಸಹಕಾರ ಸಂಘದಲ್ಲಿ ನೌಕರಿ ಮಾಡುತ್ತಿದ್ದರು. ಅವರ ತಮ್ಮಪಾರ್ಶ್ವನಾಥ (34) ಮೂಡಬಿದ್ರೆ ಬಳಿಯಿರುವ ತನ್ನಅಕ್ಕನ ಮನೆಯಲ್ಲಿ 3 ವರ್ಷಗಳಿಂದ ವಾಸ್ತವ್ಯ ಇದ್ದರು. 6 ತಿಂಗಳ ಹಿಂದೆ ಊರಿಗೆಮರಳಿದ್ದರು.

ಈ ಕುಟುಂಬಕ್ಕೆ 8 ಎಕರೆ ಜಮೀನು ಇದ್ದು ಆಸ್ತಿ ವಿಚಾರವಾಗಿ ಪುತ್ರರಿಬ್ಬರ ನಡುವೆ ಕಲಹನಡೆಯುತ್ತಲೇ ಇತ್ತು ಎಂದು ತಾಯಿ ಚಂದ್ರಮತಿ ಅವರು ಕಳಸ ಪೊಲೀಸರಿಗೆ ನೀಡಿದ ದೂರಿನಲ್ಲಿತಿಳಿಸಿದ್ದಾರೆ.

ಕೋವಿಡ್ ಸೋಂಕಿಗೆ ಒಳಗಾಗಿದ್ದ ಮಹಾವೀರ ಅವರನ್ನು ಮೂಡಿಗೆರೆ ಕೋವಿಡ್ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಶನಿವಾರ ಸಂಜೆ ಮರಸಣಿಗೆಗೆಕರೆತರಲಾಗಿತ್ತು.

'ರಾತ್ರಿ 8.30ರ ವೇಳೆಗೆ ಮರಸಣಿಗೆಯಿಂದ ಬಂದ ಪಾರ್ಶ್ವನಾಥ ಮನೆಯ ಜಗಲಿಯಲ್ಲಿಮಲಗಿದ್ದ ಅಣ್ಣ ಮಹಾವೀರನ ಮುಖ ಮತ್ತು ತಲೆಗೆ ಕತ್ತಿಯಿಂದ ಕಡಿದಿದ್ದಾನೆ. ಇದನ್ನು ಕಂಡುನಾನು ಅವನ ಕೈಯಿಂದ ಕತ್ತಿ ಕಸಿದುಕೊಂಡೆ. ಆಗ ಸೌದೆ ಕೊಟ್ಟಿಗೆಯಲ್ಲಿ ಇದ್ದ ಕೊಡಲಿಯನ್ನುಹುಡುಕಿ ಮತ್ತೆ ಅಣ್ಣನ ತಲೆ ಮತ್ತು ಎಡ ಭಾಗದ ಕಿವಿ ಬಳಿ ಕೊಚ್ಚಿದ್ದಾನೆʼಎಂದು ಚಂದ್ರಮತಿ ದೂರಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾವೀರ ಅವರನ್ನು ಆಸ್ಪತ್ರೆಗೆ ಕಳಿಸಲು ಅಕ್ಕಪಕ್ಕದಮನೆಗಳಿಗೆ ಹೋಗಿ ಕರೆದರೂ ಕೋವಿಡ್ ರೋಗಿ ಎಂಬ ಕಾರಣಕ್ಕೆ ಯಾರೂ ಸ್ಪಂದಿಸಲಿಲ್ಲ. ಅಷ್ಟರಲ್ಲಿ ಮಹಾವೀರನ ಪ್ರಾಣ ಹೋಗಿತ್ತು. ಈ ಕೊಲೆ ಆಸ್ತಿ ವಿವಾದದಿಂದನಡೆದಿದೆಎಂದು ತಿಳಿಸಿದ್ದಾರೆ.

ಪಾರ್ಶ್ವನಾಥನನ್ನು ಕಳಸ ಪೊಲೀಸರು ಬಂಧಿಸಿದ್ದಾರೆ. ಕಳಸದ ಬಜರಂಗದಳ ಕಾರ್ಯಕರ್ತರುಪಿಪಿಇ ಕಿಟ್‍ಗಳನ್ನು ಧರಿಸಿ ಶವ ಸಾಗಿಸಲು ಮತ್ತು ಅಂತ್ಯಕ್ರಿಯೆ ನಡೆಸಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT