ಬುಧವಾರ, ಅಕ್ಟೋಬರ್ 28, 2020
23 °C
ನಿರ್ವಹಣೆಯಿಲ್ಲದೇ ಸೊರಗುತ್ತಿದೆ ಸಾರ್ವಜನಿಕ ಶೌಚಾಲಯ

ನಿರ್ವಹಣೆಯಿಲ್ಲದ ಸಾರ್ವಜನಿಕ ಶೌಚಾಲಯ: ಎಲ್ಲೆಂದರಲ್ಲಿ ಮಲ–ಮೂತ್ರ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯವು ನಿರ್ವಹಣೆಯಿಲ್ಲದೇ ಸೊರಗುತ್ತಿದೆ.

ಪಟ್ಟಣ ಪಂಚಾಯಿತಿ ವತಿಯಿಂದ 8 ವರ್ಷಗಳ ಹಿಂದೆ ಪುರುಷರು ಹಾಗೂ ಮಹಿಳೆಯರು ಉಪಯೋಗಿಸಲು ಅನುಕೂಲವಾಗುವಂತೆ ಸುಮಾರು ₹ 5 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಆದರೆ, ನಿರ್ವಹಣೆಯಿಲ್ಲದ ಕಾರಣ, ಶೌಚಾಲಯವು ಬಳಕೆಯಿಂದ ದೂರ ಉಳಿದಿದ್ದು, ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರುವ ಸಾರ್ವಜನಿಕರು ಮೂತ್ರಾಲಯ ಬಳಸಲು ಪರದಾಡುವಂತಾಗಿದೆ.

ಈ ಶೌಚಾಲಯದ ಮೂತ್ರ ವಿಸ ರ್ಜನೆ ಸಿಂಕ್‌ಗಳ ಪೈಪ್‌ಗಳು ಹಾನಿಯಾ ಗಿದ್ದು, ಮೂತ್ರ ಕೊಠಡಿಯೊಳಗೇ ಸಂಗ್ರಹವಾಗುತ್ತಿದೆ. ಶೌಚಾಲಯದೊಳಗೆ ಮದ್ಯದ ಬಾಟಲಿಗಳು ರಾಶಿ ಬಿದ್ದಿದ್ದು, ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿವೆ.

ಪಟ್ಟಣದಲ್ಲಿ ಬಸ್ ನಿಲ್ದಾಣದ ಶೌಚಾಲಯವನ್ನು ಹೊರತು ಪಡಿಸಿದರೆ, ಎಸ್‌ಬಿಐ ಬ್ಯಾಂಕ್ ಬಳಿಯೊಂದು ಸಾರ್ವಜನಿಕ ಶೌಚಾಲಯವಿದೆ. ಅಲ್ಲಿ ತರಕಾರಿ ಅಂಗಡಿಗಳನ್ನು ಅಡ್ಡಲಾಗಿ ನಿರ್ಮಿಸುವುದರಿಂದ ಅದರ ಬಳಕೆಯು ಸಂಪೂರ್ಣವಾಗಿ ನಿಂತು ಹೋಗಿದೆ. ಆದ್ದರಿಂದ ಸಾರ್ವಜನಿಕರಿಗೆ ತಾಲ್ಲೂಕು ಕಚೇರಿ ಆವರಣದಲ್ಲಿರುವ ಶೌಚಾಲಯವನ್ನೇ ಬಳಸಬೇಕಿದೆ. ಆದರೆ, ಅವರು ನಿರ್ವಹಣೆ ಇಲ್ಲದ ಕಾರಣ ಜನರು ಪಟ್ಟಣದ ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜಿಸುವಂತಾಗಿದೆ.

‘ಗ್ರಾಮೀಣ ಭಾಗಗಳಿಂದ ನೂರಾರು ಮಂದಿ ದಿನನಿತ್ಯದ ಕಾರ್ಯಗಳಿಗಾಗಿ ತಾಲ್ಲೂಕು ಕಚೇರಿಗೆ ಬರುತ್ತಾರೆ. ಸಾರ್ವಜನಿಕ ಶೌಚಾಲಯವಿಲ್ಲದೇ ತಾಲ್ಲೂಕು ಕಚೇರಿಯ ಹಿಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ತಾಲ್ಲೂಕು ಕಚೇರಿ ಬಳಿಯೇ ಇಂತಹ ಪರಿಸ್ಥಿತಿಯಾದರೆ ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗುವುದಾದರೂ ಹೇಗೆ? ಕೂಡಲೇ ಶೌಚಾಲಯ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮಾಕೋನಹಳ್ಳಿ ವಿಠಲ್ ಒತ್ತಾಯಿಸಿದ್ದಾರೆ.

ಈ ಸಾರ್ವಜನಿಕ ಶೌಚಾಲಯದ ಬಳಿಯಲ್ಲಿಯೇ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಶಾಸಕರ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ ಸೇರಿದಂತೆ ಹಲ ವಾರು ಸರ್ಕಾರಿ ಕಚೇರಿಗಳಿವೆ. ಶೌಚಾಲ ಯವು ನಿರ್ವಹಣೆಯಿಲ್ಲದೇ ಗಬ್ಬು ನಾರು ತ್ತಿರುವುದರಿಂದ ನೌಕರರು ಇಡೀ ದಿನ ಮೂಗು ಮುಚ್ಚಿಕೊಂಡು ಕೆಲಸ ಮಾಡು ವಂತಾಗಿದೆ’ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.