ಮೂಡಿಗೆರೆ: ತಾಲ್ಲೂಕಿನಾದ್ಯಂತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ.

ಗುರುವಾರ ತಡರಾತ್ರಿಯಿಂದಲೂ ಸುರಿದ ಮಳೆ, ಶುಕ್ರವಾರ ಮಧ್ಯಾಹ್ನದ ಬಳಿಕ ಇಳಿಮುಖವಾಗಿದ್ದು, ಬಿಟ್ಟು ಬಿಟ್ಟು ಸುರಿಯಿತು. ನಾಲ್ಕು ದಿನಗಳಿಂದ ಸುರಿದ ಮಳೆಗೆ ಅಪಾರ ಹಾನಿಯಾಗಿದ್ದು, ತಾಲ್ಲೂಕಿನಲ್ಲಿ 65 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ವಿವಿಧೆಡೆ ಸೇತುವೆ, ಕಿರು ಸೇತುವೆಗಳು ಕುಸಿದು ಹಾನಿಯಾಗಿವೆ. ಮಳೆಯೊಂದಿಗೆ ಗಾಳಿಯ ಹೊಡೆತವೂ ಹೆಚ್ಚಾಗಿದ್ದರಿಂದ ವಿವಿಧೆಡೆ ಭೂ ಕುಸಿತವಾಗಿದೆ.

ಬಕ್ಕಿ ಗ್ರಾಮದ ಸುಬ್ಬಯ್ಯ ಎಂಬುವರ ಮನೆಯ ಗೋಡೆ, ಚಾವಣಿ ಕುಸಿದಿದ್ದು ನಷ್ಟ ಉಂಟಾಗಿದೆ. ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇಮಾವತಿ ನಗರದ ನಿಂಗಮ್ಮ, ತ್ರಿಪುರ ಗ್ರಾಮ ಪಂಚಾಯಿತಿಯ ದೇವರಮನೆ ಗ್ರಾಮದ ಸುಂದರಮ್ಮ, ಬಕ್ಕಿ ಗ್ರಾಮದ ಕಸ್ತೂರಮ್ಮ, ಅಣಜೂರಿನ ಝೌರಾ ಎಂಬುವರ ಮನೆಗಳಿಗೂ ಹಾನಿ ಉಂಟಾಗಿದೆ.

ಊರುಬಗೆ ಗ್ರಾಮದ ಭೈಧುವಳ್ಳಿ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೊಠಡಿ ಮೇಲೆ ಮರ ಬಿದ್ದು ಹಾನಿ ಯಾಗಿದ್ದು, ದೇವರುಂದದಲ್ಲಿ ಭೂಕುಸಿತ ಉಂಟಾಗಿ ಗುರುವ ಎಂಬುವರ ಮನೆ ಕುಸಿಯುವ ಆತಂಕ ಉಂಟಾಗಿದೆ. ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಗ್ಗಸಗೋಡಿನಲ್ಲಿ ಕುಡಿಯುವ ನೀರಿನ ಪಂಪ್ ಹೌಸ್ಗೆ ಹೇಮಾವತಿ ನದಿ ನೀರು ನುಗ್ಗಿ, ಪಂಪ್ಶೆಡ್ ಕೊಚ್ಚಿ ಹೋಗಿದೆ.

ತಾಲ್ಲೂಕಿನ ನದಿಗಳೆಲ್ಲವೂ ಉಕ್ಕಿ ಹರಿಯುತ್ತಿವೆ. ಮಳೆ ನೀರಿನಿಂದಾಗಿ ಬಹುತೇಕ ಗದ್ದೆಗಳು ಜಲಾವೃತವಾಗಿದ್ದು, ಬಡವನದಿಣ್ಣೆ, ಎಸ್ಟೇಟ್ ಕುಂದೂರು, ಮುಗ್ರಹಳ್ಳಿ, ಜಿ. ಹೊಸಳ್ಳಿ ಗ್ರಾಮಗಳಲ್ಲಿ ಸಸಿಮಡಿ ನಿರ್ಮಾಣಕ್ಕಾಗಿ ಹಾಕಲಾಗಿದ್ದ ಭತ್ತವೆಲ್ಲವೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಮಳೆ ಹೆಚ್ಚಾಗಿರುವುದರಿಂದ ಶುಂಠಿ ಬೆಳೆಗೂ ಹಾನಿಯಾಗಿದ್ದು, ಶುಂಠಿಯು ಕೊಳೆಯುವ ಆತಂಕ ಕಾಡುತ್ತಿದೆ.

ಮಳೆ ಇಳಿಮುಖ
ಕೊಪ್ಪ: ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಳೆ ಶುಕ್ರವಾರ ಇಳಿಮುಖ ಕಂಡಿತ್ತು. ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದ ಸಾಧಾರಣ ಮಳೆಯಾಗಿದೆ. ಶುಕ್ರವಾರ ಬೆಳಿಗ್ಗೆ ವರೆಗೆ ಕಮ್ಮರಡಿಯಲ್ಲಿ 15.4 ಸೆಂ.ಮೀ. ಮಳೆಯಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ 3.17 ಸೆಂ.ಮೀ. ಮಳೆಯಾಗಿದೆ.

ಮನೆ ಗೋಡೆ ಕುಸಿತ
ನರಸಿಂಹರಾಜಪುರ: ತಾಲ್ಲೂಕಿ ನಾದ್ಯಂತ ಗುರುವಾರ ಸಂಜೆ ಹಾಗೂ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ.

ಪಟ್ಟಣದ ಬಾವಿಹಟ್ಟಿ ನಿವಾಸಿ ಮಣಿ ಎಂಬುವರ ಮನೆಯ ಗೋಡೆ ಕುಸಿದು ಹಾನಿ ಸಂಭವಿಸಿದೆ. ಮನೆ ಸಂಪೂರ್ಣ ಬೀಳುವ ಹಂತ ತಲುಪಿದೆ. ಗುರುವಾರದಿಂದ ಶುಕ್ರವಾರ ಬೆಳಿಗ್ಗೆಯವರೆಗೆ ಎನ್.ಆರ್.ಪುರ 3.04 ಸೆಂ.ಮೀ, ಬಾಳೆಹೊನ್ನೂರು 1.84 ಸೆಂ.ಮೀ, ಮೇಗರಮಕ್ಕಿ ವ್ಯಾಪ್ತಿಯಲ್ಲಿ 3.6 ಸೆಂ.ಮೀ ಮಳೆಯಾಗಿದೆ. ಶುಕ್ರವಾರ ಮಳೆ ಕ್ಷೀಣಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.