ಮಂಗಳವಾರ, ಅಕ್ಟೋಬರ್ 4, 2022
27 °C
ಮಾಗುಂಡಿ- ಕಳಸ- ಎಸ್.ಕೆ.ಬಾರ್ಡರ್ ರಸ್ತೆ

ಸಂಚಾರ: ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಯಾತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ರಸ್ತೆಯಲ್ಲಿನ ಗುಂಡಿಗಳಿಂದಾಗಿ ಕಳಸ-ಹೊರನಾಡು ರಸ್ತೆಯಲ್ಲಿ  ಖಾಸಗಿ ಬಸ್ ಟೈರ್‌ ಸಿಡಿದು ಸುದ್ದಿಯಾಗಿ ವಾರ ಪೂರ್ಣಗೊಳ್ಳುವ ಮೊದಲೇ ಕಳಸ-ಬಾಳೆಹೊಳೆ ರಸ್ತೆಯಲ್ಲಿ ಸೋಮವಾರ ಖಾಸಗಿ ಬಸ್ಸಿನ ಹೌಸಿಂಗ್ ತುಂಡಾಗಿ ನೆಲಕ್ಕೆ ಬಿದ್ದಿದೆ. 

ಮಾಗುಂಡಿ- ಕಳಸ- ಎಸ್.ಕೆ.ಬಾರ್ಡರ್ ರಸ್ತೆ ದುರಸ್ತಿ ಮಾಡಿಸುವಂತೆ 2 ವರ್ಷಗಳಿಂದ ಒತ್ತಾಯ ಕೇಳಿಬಂದಿದ್ದರೂ, ಲೋಕೋಪಯೋಗಿ ಇಲಾಖೆ ಸ್ಪಂದಿಸಿಲ್ಲ ಎಂಬ ಆರೋಪಗಳಿವೆ. ಇದನ್ನು ಹೆದ್ದಾರಿ ಎಂದು ಕರೆಯುವಂತೆಯೇ ಇಲ್ಲ. ನೂರಾರು ಗುಂಡಿಗಳು ಇರುವ ಹೆದ್ದಾರಿಯಲ್ಲಿ ರಸ್ತೆಯನ್ನು ಹುಡುಕಿ ವಾಹನ ಚಲಾಯಿಸಬೇಕಿದೆ ಎಂದು ವಾಹನ ಚಾಲಕರು ದೂರುತ್ತಾರೆ.

ಮಾಗುಂಡಿ- ಕಳಸ- ಕುದುರೆಮುಖ- ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ ದುರಸ್ತಿ ಆಗಬೇಕು ಎಂದು ಬೇಸಿಗೆಯಲ್ಲಿ ಸ್ಥಳೀಯರು ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದರು.

ಆದರೆ, ಯೋಜನೆ ಸಿದ್ಧಪಡಿಸಿದ ಲೋಕೋಪಯೋಗಿ ಇಲಾಖೆ ಬಳಿಕ ಕ್ರಮ ಕೈಗೊಂಡಿಲ್ಲ. ರಸ್ತೆ ಅಭಿವೃದ್ಧಿ ಪಡಿಸಿಲ್ಲ ‌ಎಂದು ರಸ್ತೆ ಬಳಕೆದಾರರು ದೂರುತ್ತಾರೆ.

‘ಪಕ್ಕದ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದ ಕೂಡಲೇ ದುರಸ್ತಿ ಮಾಡುತ್ತಾರೆ. ಈ ರಸ್ತೆಯ ವಿಚಾರದಲ್ಲಿ ಇಲಾಖೆಯ ಸ್ಪಂದನೆ ಅತ್ಯಂತ ನಿರ್ಲಕ್ಷ್ಯದಿಂದ ಕೂಡಿದೆ’ ಎಂದು ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ.ಬಾಲಕೃಷ್ಣ ಭಟ್ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು