ಶುಕ್ರವಾರ, ಡಿಸೆಂಬರ್ 2, 2022
22 °C

ಕಡೂರು: ಆರ್.ಎಸ್.ಎಸ್. ಪಥಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರು ಕಡೂರು ಪಟ್ಟಣದಲ್ಲಿ ಭಾನುವಾರ ಗಣವೇಷ ಧರಿಸಿ ಪಥಸಂಚಲನ ನಡೆಸಿದರು.

ಪಟ್ಟಣದ ಕೋರ್ಟ್ ಗಣಪತಿ ದೇವಾಲಯದಿಂದ ಆರಂಭವಾದ ಪಥಸಂಚಲನ, ದೊಡ್ಡಪೇಟೆ, ಬಿ.ಎಚ್. ರಸ್ತೆ, ಜೆ.ಟಿ. ರಸ್ತೆ, ಕದಂಬವೃತ್ತ, ಹಳೇಪೇಟೆ, ತ್ಯಾಗರಾಜನಗರ ಮಾರ್ಗವಾಗಿ ಗಣಪತಿ ಪೆಂಡಾಲ್ ಆವರಣದವರೆಗೆ ಸಾಗಿ ಮುಕ್ತಾಯಗೊಂಡಿತು. ಪಥಸಂಚಲನದಲ್ಲಿ ಘೋಷವಾದ್ಯ ಗಮನ ಸೆಳೆಯಿತು.

ಅಲಂಕೃತ ಆಟೋದಲ್ಲಿದ್ದ ಡಾ.ಹೆಡ್ಗೆವಾರ್ ಮತ್ತು ಗೋಳ್ವಾಲ್ಕರ್ ಭಾವಚಿತ್ರಕ್ಕೆ ನಾಗರಿಕರು ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಗಣಪತಿ ಪೆಂಡಾಲ್ ಆವರಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಹಾಸನ ವಿಭಾಗ ಕಾರ್ಯಕಾರಿಣಿ ಸದಸ್ಯ ನರೇಂದ್ರ ವಿಶೇಷ ಬೌದ್ಧಿಕ್ ನೆರವೇರಿಸಿದರು. ಲಕ್ಷಾ ಗ್ರೂಪ್ಸ್ ಮಾಲೀಕ ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬೆಳ್ಳಿಪ್ರಕಾಶ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು