ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತರೀಕೆರೆ: ‘ಭವನ’ಗಳಿಗೆ ಬಲ ನೀಡಿದ ನರೇಗಾ

ಗ್ರಾಮೀಣ ಪ್ರದೇಶದಲ್ಲಿ ಆಡಳಿತ ಭವನ, ಅಂಗನವಾಡಿ ಕಟ್ಟಡ ನಿರ್ಮಾಣ
Published 16 ಮೇ 2023, 19:34 IST
Last Updated 16 ಮೇ 2023, 19:34 IST
ಅಕ್ಷರ ಗಾತ್ರ

ಹಾ.ಮ.ರಾಜಶೇಖರಯ್ಯ

ತರೀಕೆರೆ: ಗ್ರಾಮ ಪಂಚಾಯಿತಿಗಳನ್ನು ಗ್ರಾಮ ಒನ್ ವ್ಯಾಪ್ತಿಗೆ ಒಳಪಡಿಸಿ ಉತ್ತಮ ಆಡಳಿತ ನೀಡಲು ಗ್ರಾಮೀಣ ಭಾಗದ ‘ಭವನ’ಗಳಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಬಲ ನೀಡಿದೆ.

ಅಭಿವೃದ್ಧಿಯಿಂದ ವಂಚಿತವಾದ ಗ್ರಾಮಗಳಲ್ಲಿ ಉತ್ತಮ ಆಡಳಿತ ಭವನ, ಶಿಕ್ಷಣಕ್ಕೆ ಬಲ ನೀಡಲು ಅಂಗನವಾಡಿ ಕಟ್ಟಡ, ಮಹಿಳೆಯರಿಗೆ ಸ್ವಾವಲಂಬನೆ ಸಹಕಾರಿಯಾಗಲು ಸಂಜೀವಿನಿ ಶೆಡ್‌ಗಳ ನಿರ್ಮಾಣ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದೆ.

ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಭಾಗದಲ್ಲಿ ಹೊಸ ಆಡಳಿತ ಭವನಗಳಿಗೆ ಹೊಸ ಮೆರಗು ಬರಲು ಕಾರಣವಾಗಿದೆ. ತಾಲ್ಲೂಕಿನ ಹಾದೀಕೆರೆ, ಉಡೇವಾ ಗ್ರಾಮದಲ್ಲಿರೂ ₹ 18 ಲಕ್ಷದಲ್ಲಿ ನೂತನ ಆಡಳಿತ ಭವನಗಳು ನಿರ್ಮಾಣವಾದರೆ ದೋರನಾಳು, ಬೇಲೆನಹಳ್ಳಿ, ಕರಕುಚ್ಚಿ, ಕುಡ್ಲೂರು, ನಂದಿಬಟ್ಟಲು, ಬೆಟ್ಟದಹಳ್ಳಿ, ಹುಣಸಘಟ್ಟ, ಎಂ.ಸಿ.ಹಳ್ಳಿ, ಕೆಂಚಿಕೊಪ್ಪ ಗ್ರಾಮಗಳಲ್ಲಿರೂ ₹ 35.50 ಲಕ್ಷದ ವೆಚ್ಚದ ಭವನಗಳ ಕಾಮಗಾರಿ ನಡೆಯುತ್ತವೆ.

ಮಹಿಳೆಯರ ಸ್ವಸಹಾಯ ಸಂಘಗಳಿಗೆ ಸಭೆ ಸಮಾರಂಭಗಳನ್ನು ನಡೆಸಲು ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗಲು ತಾಲ್ಲೂಕಿನ ಭಾವಿಕೆರೆ ಹಾಗೂ ಸುಣ್ಣದಹಳ್ಳಿ ಗ್ರಾಮದಲ್ಲಿ ₹ 17.50 ಲಕ್ಷ ವೆಚ್ಚದಲ್ಲಿ ಸಂಜೀವಿನಿ ಶೆಡ್ ನಿರ್ಮಾಣವಾಗಿವೆ. ಶಿಕ್ಷಣ ಕ್ಷೇತ್ರಕ್ಕೆ ಬಲ ನೀಡಲು ತಾಲ್ಲೂಕಿನಲ್ಲಿ ಅಮೃತಾಪುರ, ಗುಳ್ಳದಮನೆ, ಕೆಂಚಿಕೂಪ್ಪ, ಸುಣ್ಣದಹಳ್ಳಿ, ಉಡೇವಾ ಗ್ರಾಮದಲ್ಲಿ ₹ 8 ಲಕ್ಷ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ತಾಲ್ಲೂಕಿನ ಹಾದೀಕೆರೆ, ದೋರನಾಳು, ಕೆಂಚಿಕೊಪ್ಪ, ಗುಳ್ಳದಮನೆ, ಕೋರನಹಳ್ಳಿ, ಲಕ್ಕವಳ್ಳಿ, ಲಿಂಗದಹಳ್ಳಿ, ಸುಣ್ಣದಹಳ್ಳಿ, ಉಡೇವಾ ಗ್ರಾಮದಲ್ಲಿ ₹ 13 ಲಕ್ಷ ವೆಚ್ಚದಲ್ಲಿ ದಾಸೋಹ ಭವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಿಂದ ಕಾರ್ಮಿಕರಿಗೆ ಕೆಲಸ ಸಿಗುವ ಜೊತೆಗೆ ಉತ್ತಮ ಕೂಲಿ ಲಭ್ಯವಾಗುತ್ತದೆ. ಇದರಿಂದ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು ಸುಣ್ಣದಹಳ್ಳಿಯ ಕಾರ್ಮಿಕ ಪ್ರವೀಣ.

ಗ್ರಾಮೀಣ ಭಾಗದಲ್ಲಿ ಹೂಸ ಭವನ ನಿರ್ಮಾಣ ಮಾಡಲು ಇಲಾಖೆಯ ಅನುದಾನ ಹಾಗೂ ಸ್ವಂತ ಅನುದಾನದ ಲಭ್ಯತೆ ಕೊರತೆಯನ್ನು ನರೇಗಾ ಯೋಜನೆ ನೀಗಿಸಿದೆ. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ವರ್ಷ ಪೂರ್ತಿ ಕೆಲಸ ನೀಡಲು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ ಅಮೃತಾಪುರ ಪಿಡಿಒ ಪವಿತ್ರಾ.

‘ಜನಸ್ನೇಹಿ ಗ್ರಾಮ ಪಂಚಾಯಿತಿ’

ಗ್ರಾಮದ ಸರ್ವಾಂಗಿಣ ಪ್ರಗತಿಗೆ ಗ್ರಾಮ ಪಂಚಾಯಿತಿ ವ್ಯವಸ್ಥೆ ಅತ್ಯಂತ ಪ್ರಮುಖವಾದುದು. ಸದೃಢ ಆಡಳಿತಕ್ಕೆ ಸದೃಢ ಆಡಳಿತ ಸೌಧ ಎಂಬ ಆಶಯದೂಂದಿಗೆ ಹೊಸದಾಗಿ ತಾಲ್ಲೂಕಿನಾದ್ಯಾಂತ ನರೇಗಾ ಯೋಜನೆಯಡಿ ಆಡಳಿತ ಭವನ, ಸಂಜೀವಿನಿ ಶೆಡ್, ಅಂಗನವಾಡಿ ಭವನ ನಿರ್ಮಾಣಮಾಡಿ ಜನಸ್ನೇಹಿ ಗ್ರಾಮ ಪಂಚಾಯಿತಿಗಳಾಗಿ ಪರಿವರ್ತಿಸಲಾಗುತ್ತಿದೆ ತಾಲ್ಲೂಕು ಪಂಚಾಯಿತಿ ಇಒ ಗೀತಾಶಂಕರ್.

ಇಓ ಗೀತಾಶಂಕರ್. 
ಇಓ ಗೀತಾಶಂಕರ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT