ಮೂಡಿಗೆರೆ: ತಾಲ್ಲೂಕಿನಿಂದ ವಿವಿಧ ಗ್ರಾಮಗಳಿಗೆ ತೆರಳುತ್ತಿದ್ದ ಬಸ್‌ಗಳನ್ನು ಜಿಲ್ಲೆಯ ಬಿಂಡಿಗಾದಲ್ಲಿ ನಡೆದ ದೇವೀರಮ್ಮನವರ ಜಾತ್ರೆಗೆ ಕಳುಹಿಸಿದ್ದರಿಂದ ಗ್ರಾಮೀಣ ಭಾಗಕ್ಕೆ ಬಸ್ ಸೇವೆಯಿಲ್ಲದೆ ಪರದಾಡುವಂತಾಗಿತ್ತು.

ಹಬ್ಬಕ್ಕಾಗಿ ಬೆಂಗಳೂರು, ಮಂಗಳೂರು, ಶಿವಮೊಗ್ಗ ಭಾಗಗಳಿಂದ ಬಂದ ಸ್ಥಳೀಯರು ತಮ್ಮ ಸ್ವಗ್ರಾಮಗಳಿಗೆ ತೆರಳಲು ದುಬಾರಿ ಬಾಡಿಗೆ ನೀಡಿ ಖಾಸಗಿ ವಾಹನಗಳಲ್ಲಿ ತೆರಳಿದರು. ಹಬ್ಬದ ಖರೀದಿಗಾಗಿ ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ಬರಲು ಹಾಗೂ ಬಿಂಡಿಗಾ ದೇವೀರಮ್ಮನ ಜಾತ್ರೆಗೆ ತೆರಳಿದ್ದವರು ಸ್ವಗ್ರಾಮಗಳಿಗೆ ತೆರಳಲು ಪರದಾಡಿದರು.

‘ಎಲ್ಲ ಗ್ರಾಮೀಣ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ತಾಲ್ಲೂಕಿನಲ್ಲಿ ನಡೆಯುವ ಅಗ್ರಹಾರ ಜಾತ್ರೆ, ಚುನಾವಣಾ ಪ್ರಚಾರ ಸಭೆಗಳಿಗೆ ಬಸ್‌ಗಳನ್ನು ಕಳುಹಿಸಿದಾಗಲೂ ಗ್ರಾಮೀಣ ಭಾಗದ ಬಸ್ ಸೇವೆಯನ್ನೇ ಸ್ಥಗಿತಗೊಳಿಸಲಾಗುತ್ತದೆ. ಇಂತಹ ಸಮಯದಲ್ಲಿ ಅಕ್ಕಪಕ್ಕದ ಘಟಕಗಳಿಂದಾದರೂ ಸೇವೆ ಬಡೆದು ಗ್ರಾಮೀಣ ಪ್ರದೇಶಗಳಿಗೆ ಬಸ್ ಕಲ್ಪಿಸಬೇಕು. ಬಸ್ ಇಲ್ಲದಿರುವ ಬಗ್ಗೆ ಮೊದಲೇ ಪ್ರಚಾರಗೊಳಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ. ಮುಂದಾದರೂ ಇಂತಹ ಕ್ರಮಗಳನ್ನು ಅನುಸರಿಸಬೇಕು’ ಎಂದು ಸ್ಥಳೀಯ ನಿವಾಸಿ ಲೋಕೇಶ್ ಮೇಗಲಪೇಟೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.