ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳುವಳ್ಳಿ: ಶಾಲಾ ತಡೆಗೋಡೆ ಕುಸಿತ

Last Updated 4 ಜುಲೈ 2022, 7:12 IST
ಅಕ್ಷರ ಗಾತ್ರ

ಕಳಸ: ಇಲ್ಲಿಗೆ ಸಮೀಪದ ಹಳುವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ತಡೆಗೋಡೆ ಭಾನುವಾರ ಕುಸಿದಿದೆ. ಸುಬ್ರಮಣ್ಯೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವ ಈ ಶಾಲೆಯು ಎತ್ತರದ ದಿಬ್ಬರ ಮೇಲೆ ಇದೆ.

ಶಾಲೆಯ ಪಕ್ಕದ ಮಣ್ಣು ಕುಸಿದಿದ್ದರಿಂದ ಕೆಲ ವರ್ಷಗಳ ಹಿಂದೆ ಇಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಲಾಗಿತ್ತು. ಕಳೆದ 2 ದಿನಗಳ ಸತತ ಮಳೆಯ ಕಾರಣಕ್ಕೆ ತಡೆಗೋಡೆಯ ಬಹುಭಾಗ ಕುಸಿದು ಬಿದ್ದಿದೆ. ಶಾಲೆಯ ಕಟ್ಟಡವು ಕುಸಿದಿರುವ ತಡೆಗೋಡೆಯ ಸನಿಹದಲ್ಲೇ ಇದೆ. ಮಣ್ಣು ಕುಸಿತ ಮುಂದುವರಿದರೆ ಶಾಲಾ ಕಟ್ಟಡಕ್ಕೂ ಅಪಾಯ ಇದೆ.

ದಿಬ್ಬದ ಪಕ್ಕ ಹಾದುಹೋಗುವ ಶಾಲಾ ಮಕ್ಕಳಿಗೂ ಅಪಾಯ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT