ಬಾಳೆಹೊನ್ನೂರು: ರಂಭಾಪುರಿ ಸ್ವಾಮೀಜಿ ಅವರ 34ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಬೀದರ್ ಜಿಲ್ಲೆ ಬಸವಕಲ್ಯಾಣದ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಮಾನವ ಧರ್ಮ ಮಂಟಪದಲ್ಲಿ ಸೆ.22ರಿಂದ ಅ.2ರ ವರೆಗೆ ನಡೆಯಲಿದೆ ಎಂದು ರಂಭಾಪುರಿ ಪೀಠದ ವಾರ್ತಾ ಸಂಯೋಜನಕಾಧಿಕಾರಿ ಸಿ.ಎಚ್.ಬಾಳನಗೌಡ್ರು ತಿಳಿಸಿದ್ದಾರೆ.

ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮ ಸಮ್ಮೇಳನ ನಡೆಯಲಿದ್ದು, 22ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭವನ್ನು ಉದ್ಘಾಟಿಸುವರು. ಶರನ್ನವರಾತ್ರಿ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ ರಂಭಾಪುರಿ ಸ್ವಾಮೀಜಿ ಅವರ ಭಾವಚಿತ್ರ ಬಿಡುಗಡೆ ಮಾಡುವರು. ಸಮಿತಿಯ ಗೌರವಾಧ್ಯಕ್ಷ ಹಾರಕೂಡ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯ ನೇತೃತ್ವ ವಹಿಸಲಿದ್ದು, ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯ, ಸಚಿವ ರಹೀಂಖಾನ್, ಶಾಸಕರಾದ ಡಾ.ಸಿದ್ಧಲಿಂಗ ಪಾಟೀಲ, ಶರಣು ಬಿ.ಸಲಗರ, ಮಾಜಿ ಸಚಿವ ರಾಜಶೇಖರ ಪಾಟೀಲ, ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್ ಪಾಲ್ಗೊಳ್ಳುವರು.

24ರಂದು ಕೊಲ್ಲಿಪಾಕಿ ಕ್ಷೇತ್ರ ದರ್ಶನ ಕೃತಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಡುಗಡೆಗೊಳಿಸಲಿದ್ದು, ಶಾಸಕ ಡಾ.ಅವಿನಾಶ ಜಾಧವ ಪಾಲ್ಗೊಳ್ಳುವರು.
25ರಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಬಿಜೆಪಿ ರಾಜ್ಯಾಧ್ಯಕ್ಷ-ಶಾಸಕ ಬಿ.ವೈ.ವಿಜಯೇಂದ್ರ, ಶಾಸಕ ಅಲ್ಲಮಪ್ರಭು ಪಾಟೀಲ, ಅಭಿಮನ್ಯು ಪವಾರ ಭಾಗವಹಿಸುವರು. 26ರಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ವಿಜಯಾನಂದ ಕಾಶಪ್ಪನವರ, ಬಿ.ಆರ್.ಪಾಟೀಲ, ಜಿ.ಎಸ್.ಪಾಟೀಲ, ಸಿ.ಸಿ.ಪಾಟೀಲ, ಮಾಜಿ ಸಂಸದ ಬಸವರಾಜ ಪಾಟೀಲ, ಅಶೋಕ ಖೇಣಿ ಭಾಗವಹಿಸುವರು.

27ರಂದು ರಂಭಾಪುರಿ ಬೆಳಗು ಪತ್ರಿಕೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡುವರು. ಸಂಸದ ಜಗದೀಶ ಶೆಟ್ಟರ್, ಅಖಿಲ ಭಾರತ ವೀರೈಶವ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ, ಬಂಡೆಪ್ಪಾ ಖಾಶಂಪುರ ಪಾಲ್ಗೊಳ್ಳುವರು. 28ರಂದು ಕೇಂದ್ರ ಸಚಿವ ವಿ.ಸೋಮಣ್ಣ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ಸಚಿವ ಶರಣುಪ್ರಕಾಶ ಪಾಟೀಲ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಂ.ವಾಯ್.ಪಾಟೀಲ, ಸಂಭಾಜಿರಾವ ಪಾಟೀಲ ಭಾಗವಹಿಸುವರು. 29ರಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಲಕ್ಷ್ಮಣ ಸವದಿ, ಹರೀಶ ಪೂಂಜಾ ಪಾಲ್ಗೊಳ್ಳುವರು. 30ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಮುರಗೇಶ ನಿರಾಣಿ, ಸುಭಾಷ ಕಲ್ಲೂರ, ಸುಭಾಷ ಗುತ್ತೆದಾರ, ವಿಜಯಸಿಂಗ್ ಭಾಗವಹಿಸುವರು.

ಅ.1ರಂದು ಮಾಜಿ ಕೇಂದ್ರ ಸಚಿವ ಶಿವರಾಜ ಪಾಟೀಲ, ರಾಜ್ಯ ಸಚಿವ ಬೋಸರಾಜ, ಶಾಸಕ ಶರಣಗೌಡ ಕಂದಕೂರ, ಬಿಜೆಪಿ ಮುಖಂಡ ನಳಿನಕುಮಾರ ಕಟೀಲು ಪಾಲ್ಗೊಳ್ಳಲಿದ್ದಾರೆ.

ಉಪನ್ಯಾಸ: ವಿವಿಧ ವಿಷಯಗಳ ಕುರಿತು ಶಿವಾಚಾರ್ಯರು, ವಿದ್ವಾಂಸರಿಂದ ಉಪನ್ಯಾಸದ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪೀಠದಿಂದ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 27ರಂದು ಕೃಷಿ ಇಲಾಖೆಯ ಸಹಕಾರದೊಂದಿಗೆ ಕೃಷಿ ಮೇಳ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.