ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಬಿದಿರೆಯ ಬಳಿ ಬೈಕಿನಲ್ಲಿ ಸಾಗುವಾಗ ಗುಂಡು ತಗುಲಿ ಬೈಕ್ ಸವಾರರಿಬ್ಬರು ಸಾವಿಗೀಡಾಗಿದ್ದಾರೆ.
ಗುಂಡು ಹಾರಿಸಿದ ಆರೋಪಿ ರಮೇಶ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿದಿರೆಯ ಪ್ರವೀಣ್ (24) ಹಾಗೂ ಪ್ರಕಾಶ್ (25) ಮೃತಪಟ್ಟವರು. ಇಬ್ಬರು ಸಂಬಂಧಿಕರು. ಬೆಳಿಗ್ಗೆ 9.45ರ ಹೊತ್ತಿನಲ್ಲಿ ಘಟನೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಬಾಳೆಹೊನ್ನೂರು ಠಾಣೆ ಪೊಲೀಸರು ಘಟನಾ ಸ್ಥಳ ಪರಿಶೀಲನೆ ಮಾಡಿದ್ದಾರೆ.
‘ಅಂಗನವಾಡಿಗೆ ಮಕ್ಕಳನ್ನು ಕರೆದೊಯ್ಯಲು ಹೋಗುತ್ತಿದ್ದ ಸಹಾಯಕಿಯನ್ನು ರಮೇಶ್ ಅಡ್ಡಗಟ್ಟಿದ್ದಾರೆ.
ಆ ಮಹಿಳೆಗೆ ಬಂದೂಕು ತೋರಿಸಿ ಕೊಲ್ಲುವುದಾಗಿ ಹೇಳಿದ್ದಾರೆ. ಅವರು ಹಾರಿಸಿದ ಗುಂಡು ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ (ಒಬ್ಬರಿಗೆ ಎದೆ ಭಾಗ, ಮತ್ತೊಬ್ಬರಿಗೆ ಭುಜ) ತಗುಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ, ಅಷ್ಟರಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.