ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಕ್ಕೆ ಆಧಾರ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ: ಸಿ.ಟಿ.ರವಿ

Last Updated 1 ಆಗಸ್ಟ್ 2020, 11:47 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಆರೋಪಕ್ಕೆ ಆಧಾರ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಸವಾಲು ಹಾಕಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರೋಪ ಮಾಡುವುದು ಸುಲಭ. ಅದಕ್ಕೆ ಆಧಾರ ಒದಗಿಸುವುದು ಕಷ್ಟ ಎಂಬುದು ಅವರ ಮಾತಿನಿಂದಲೇ ವ್ಯಕ್ತವಾಗುತ್ತದೆ. ‘ರೀ ಡ್ಯು’ ನೆಪದಲ್ಲಿ 700 ಎಕರೆ ಡಿನೋಟಿಫೈ ಮಾಡಲಾಗಿದೆ. ‘ರೀ ಡ್ಯು’ ಪರಿಭಾಷೆ ಹುಟ್ಟುಹಾಕಿದ್ದು ಯಾರು ಎಂದು ಸಿದ್ದರಾಮಯ್ಯ ಉತ್ತರಿಸಬೇಕು’ ಎಂದು ಕುಟುಕಿದರು.

‘ಭ್ರಷ್ಟಾಚಾರ ಮಾಡಿದ್ದರೆ ನೇಣು ಹಾಕಲಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅವರು ಪ್ರಾಮಾಣಿಕರೇ ಎಂದು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡರೆ ಸಾಕು. ನಾವು ನೇಣಿಗೆ ಹಾಕುವ ಅಗತ್ಯ ಇಲ್ಲ’ ಎಂದು ಚುಚ್ಚಿದರು.

‘ರಾಜಕೀಯ ಮೇಲಾಟ, ಕೆಸರೆರಚಾಟಕ್ಕೆ ಕಾಲು ಹಿಡಿಯುವುದು ತಪ್ಪು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಬಿಜೆಪಿ ಇದೆ. ಈ ಜಿಲ್ಲೆ ಸಿ.ಪಿ.ಯೋಗೇಶ್ವರ್‌ಗೆ ಮಾದರಿ. ರಾಮನಗರ ಜಿಲ್ಲೆಯಲ್ಲಿ ಹೀಗೆ ಬಿಜೆಪಿ ಕಟ್ಟಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT