ಬೀರೂರು (ಕಡೂರು): ಹಲವು ವರ್ಷಗಳ ಹೋರಾಟದ ಫಲವಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಬೀರೂರು ಪುರಸಭೆಯ ಕಸ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲಿಯೇ ಮುಕ್ತಿ ದೊರೆಯುವ ಭರವಸೆ ಸಿಕ್ಕಿದೆ.

ಬೀರೂರು ಪುರಸಭೆ ವ್ಯಾಪ್ತಿಯ 5,230 ಮನೆಗಳಿಂದ ನಿತ್ಯವೂ 9 ಟನ್ನಷ್ಟು ಕಸ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಡಿ ಪುರಸಭೆಯು ಬೀರೂರು ಹೋಬಳಿಯ ಹಂದಿ ಜೋಗಿಹಟ್ಟಿ ಬಳಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾದರೂ ಸ್ಥಳೀಯರ ವಿರೋಧದಿಂದ ಸಾಧ್ಯವಾಗಲಿಲ್ಲ. ಕಡೆಗೆ 2020ರಲ್ಲಿ ಬೀರೂರು ಹೋಬಳಿಯ ಬಾಕಿನಕೆರೆ ಸಮೀಪ ಹಿರಿಯಂಗಳ ವ್ಯಾಪ್ತಿಯ ಅರಣ್ಯ ಇಲಾಖೆಯ ನೆಡುತೋಪಿನ ಬಳಿ ಸರ್ವೆ ನಂ. 434 ಮತ್ತು 435ರಲ್ಲಿ 8.20 ಎಕರೆ ಸರ್ಕಾರಿ ಭೂಮಿಯಲ್ಲಿ ಘಟಕ ಸ್ಥಾಪನೆಗೆ ಅನುಮೋದನೆ ಸಿಕ್ಕು ಭೂಮಿಯೂ ಮಂಜೂರಾಯಿತು.

2020ರಲ್ಲಿ ಪುರಸಭೆಯು ಜಾಗವನ್ನು ವಶಕ್ಕೆ ಪಡೆದು, ಅಲ್ಲಿ ₹30 ಲಕ್ಷ ವ್ಯಯಿಸಿ ಕಾಂಪೌಂಡ್ ನಿರ್ಮಿಸಿ, ಘಟಕ ಸ್ಥಾಪನೆಗೆ ಮುಂದಾದರೂ ಡಿಪಿಆರ್ ಅನುಮೋದನೆ ದೊರೆಯದ ಕಾರಣ ಸಿವಿಲ್ ಕಾಮಗಾರಿ ವರ್ಷಗಳ ಕಾಲ ನನೆಗುದಿಗೆ ಬಿದ್ದಿತ್ತು. 2024ರ ನವೆಂಬರ್ನಲ್ಲಿ ಮತ್ತೆ ಕಾಮಗಾರಿಗೆ ಚಾಲನೆ ದೊರೆತು, ಈಗ ಘಟಕ ಸ್ಥಾಪನೆ ಬಹುತೇಕ ಪೂರ್ಣಗೊಂಡಿದೆ. ಚರಂಡಿ ನಿರ್ಮಾಣ, ಯಂತ್ರೋಪಕರಣ ಅಳವಡಿಕೆ ಕೆಲಸ ಬಾಕಿ ಇದೆ. ಹಸಿಕಸ, ಒಣಕಸ ಬೇರ್ಪಡಿಸಲು ಸಂಸ್ಕರಣಾ ಘಟಕ, ವಾಚ್ಮನ್ ನಿವಾಸ ಪೂರ್ಣಗೊಂಡಿದ್ದು ಸೆಪ್ಟೆಂಬರ್ ಮಧ್ಯಭಾಗದ ಹೊತ್ತಿಗೆ ಸಿವಿಲ್ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ ಇದೆ.

ಒಣಕಸ ಬೇರ್ಪಡಿಸುವ ಎಂಆರ್ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಅಳವಡಿಕೆಯಾದರೆ, ಆರ್ಡಿಎಫ್ (ರೆಫ್ಯೂಸ್ಡ್ ಡಿರೈವ್ಡ್ ಫ್ಯೂಯೆಲ್) ದೊರೆಯುತ್ತದೆ. ಈ ತ್ಯಾಜ್ಯ ಉತ್ಪನ್ನಕ್ಕೆ ಸಿಮೆಂಟ್ ಕಂಪನಿಗಳು ಮತ್ತು ತ್ಯಾಜ್ಯದಿಂದ ಉತ್ಪಾದಿಸುವ ವಿದ್ಯುತ್ ಘಟಕಗಳಲ್ಲಿ ಬೇಡಿಕೆ ಇದೆ. ಹಸಿ ಕಸವನ್ನು ಅದಕ್ಕಾಗಿಯೇ ಸ್ಥಾಪಿಸಿದ ಪ್ಲಾಟ್ಫಾರಂನಲ್ಲಿ ಹಾಕಿ ಕೆಲವು ದಿನಗಳು ಬಿಟ್ಟು ನಂತರ, ತಿರುವಿ ಹಾಕಿದರೆ ಗೊಬ್ಬರ ತಯಾರಾಗುತ್ತದೆ. ಅದನ್ನು ಟ್ರಾಮೆಲ್ ಯಂತ್ರದ ಮೂಲಕ ಜರಡಿಯಾಡಿ ಗ್ರೇಡಿಂಗ್ ಮಾಡಬಹುದು. ಇದರಲ್ಲಿ 4 ಮಿ.ಮೀ ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಗೊಬ್ಬರ ಉತ್ಪಾದನೆಯಾಗಲಿದ್ದು, ಅದನ್ನು ಕೃಷಿ ಇಲಾಖೆಯ ಅನುಮೋದನೆ (ನೈಟ್ರೋಜನ್, ಫಾಸ್ಫರಸ್, ಕೇಲಿಯಂ ಅಥವಾ ಪೊಟ್ಯಾಷ್ ಅಂಶಗಳ ಆಧಾರದಲ್ಲಿ) ಮತ್ತು ದರ ನಿಗದಿಯ ಮೇರೆಗೆ ಕೃಷಿಯಲ್ಲಿ ಗೊಬ್ಬರವಾಗಿ ಉಪಯೋಗಿಸಲು ನೆರವಾಗುತ್ತದೆ. ಈ ಮೊದಲು ಹಸಿಕಸ, ಒಣಕಸ ಎನ್ನುವ ಎರಡು ವಿಧ ಮಾತ್ರ ಇತ್ತು. 2023ರ ತಿದ್ದುಪಡಿ ನಂತರ, ಜನರು 3 ವಿಧದಲ್ಲಿ ಕಸವನ್ನು ಬೇರ್ಪಡಿಸಬೇಕು (ಹಸಿ, ಒಣ ಮತ್ತು ಡೊಮೆಸ್ಟಿಕ್ ಹಜಾರ್ಡಸ್ ವೇಸ್ಟ್). ಮೂರನೇ ವಿಧದ ಕಸ ವಿಲೇವಾರಿಯಿಂದಲೂ ಪುರಸಭೆಗೆ ಆದಾಯ ಲಭ್ಯವಾಗಲಿದೆ ಎನ್ನುತ್ತಾರೆ ಪುರಸಭೆಯ ಪರಿಸರ ಎಂಜಿನಿಯರ್ ಮಹಮದ್ ನೂರುದ್ದೀನ್.

ಪುರಸಭೆಯು ಸ್ವಚ್ಛ ಭಾರತ್ ಮಿಷನ್ ಅನುದಾನದಲ್ಲಿ ಒಂದು ಜೆಸಿಬಿ, ಒಂದು ಟ್ರ್ಯಾಕ್ಟರ್ ಮತ್ತು ಎರಡು ಆಟೊ ಟಿಪ್ಪರ್ ಖರೀದಿಸಿದೆ. ನಿತ್ಯ 5 ಆಟೊ ಟಿಪ್ಪರ್ ಮತ್ತು 3 ಟ್ರ್ಯಾಕ್ಟರ್ ಕಸ ಸಂಗ್ರಹಣೆ ಮಾಡುತ್ತಿದೆ. ಸದ್ಯ ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಯಗಟಿ ರಸ್ತೆಯ ಮುತ್ತಿನಕಟ್ಟೆಯ ಸಮೀಪ ಆಶ್ರಯ ಬಡಾವಣೆಯಲ್ಲಿ ಸುರಿದು ಬೆಂಕಿ ಹಾಕಲಾಗುತ್ತಿದೆ. ಇದರಿಂದ ಪರಿಸರ ಮತ್ತು ಸುತ್ತಲಿನ ಕೃಷಿ ವ್ಯವಸ್ಥೆಗೆ ಹಾನಿಯಾಗುತ್ತದೆ ಎನ್ನುವುದು ಅಲ್ಲಿನ ರೈತರ ದೂರು. ಇಲ್ಲಿ ಸಂಗ್ರಹಿಸುತ್ತಿರುವ ಘನ ತ್ಯಾಜ್ಯದ ತೆರವಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಆರೇಳು ತಿಂಗಳಲ್ಲಿ ಈ ಕಸ ತೆರವುಗೊಳ್ಳುವ ವಿಶ್ವಾಸ ಇದೆ ಎನ್ನುತ್ತವೆ ಪುರಸಭೆ ಮೂಲಗಳು.

ಘನತ್ಯಾಜ್ಯ ವಿಲೇವಾರಿಯ ವೈಜ್ಞಾನಿಕ ಘಟಕ ಸ್ಥಾಪನೆ ಕಾಮಗಾರಿ ಬಹುತೇಕ ಮುಗಿದಿದ್ದು, ಯಂತ್ರೋಪಕರಣ ಜೋಡಣೆ ಸೇರಿದಂತೆ ಉಳಿದ ಕಾಮಗಾರಿ ಬೇಗನೆ ಪೂರ್ಣಗೊಳಿಸುವ ಯತ್ನ ನಡೆದಿದೆ. ಎಲ್ಲರ ಸಹಕಾರದಿಂದ ಯೋಜನೆ ಯಶ ಕಾಣಲಿದೆ ಎಂಬ ಆಶಯವಿದೆ ಎನ್ನುತ್ತಾರೆ ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ.

ಶಾಶ್ವತ ಪರಿಹಾರಕ್ಕೆ ಯತ್ನ

‘ತ್ಯಾಜ್ಯ ವಿಲೇವಾರಿ ಘಟಕದಲ್ಲಿ ₹1 ಕೋಟಿ ವೆಚ್ಚದಲ್ಲಿ 2 ಯಂತ್ರಗಳು ಅಳವಡಿಕೆಯಾಗಬೇಕಿದ್ದು, ಸಿವಿಲ್ ಕಾಮಗಾರಿ ಮುಕ್ತಾಯದ ನಂತರ ಜಿಲ್ಲಾಧಿಕಾರಿ ಕಚೇರಿಗೆ ವರ್ಕ್ ಆರ್ಡರ್ ಸಲ್ಲಿಸಬೇಕಿದೆ. ಯಂತ್ರೋಪಕರಣಗಳ ಹಣವು ಸ್ವಚ್ಛ ಭಾರತ ಯೋಜನೆಯಲ್ಲಿ ದೊರೆಯಲಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಘಟಕವು ಸುತ್ತಮುತ್ತಲಿನ ಪ್ರದೇಶದ ನಾಗರಿಕರ ಆರೋಗ್ಯ ಪರಿಣಾಮ ಬೀರುವುದಿಲ್ಲ ಎನ್ನುವ ಇಸಿ ( ಎನ್ವಿರಾನ್ಮೆಂಟ್ ಕ್ಲಿಯರೆನ್ಸ್) ಪತ್ರವೂ ಲಭಿಸಬೇಕಿದೆ. ಒಟ್ಟಾರೆ ಘಟಕ ಸ್ಥಾಪನೆಗೆ ಇದ್ದ ಅಡೆತಡೆಗಳು ದೂರವಾಗಿದ್ದು, ಡಿಸೆಂಬರ್ ಅಥವಾ 2026ರ ಜನವರಿ ಹೊತ್ತಿಗೆ ಘಟಕ ಕಾರ್ಯಾರಂಭ ಮಾಡಬಹುದು ಎನ್ನುವ ನಿರೀಕ್ಷೆ ಇದೆ. ಪುರಸಭೆಯು ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ಯತ್ನ ನಡೆದಿದೆ’ ಎನ್ನುತ್ತಾರೆ ಮುಖ್ಯಾಧಿಕಾರಿ ಜಿ.ಪ್ರಕಾಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.