ಶುಕ್ರವಾರ, ಆಗಸ್ಟ್ 19, 2022
21 °C

ಹಿಜಾಬ್ ಕುರಿತ ಹೈಕೋರ್ಟ್‌ ಆದೇಶಕ್ಕೆ ಪ್ರತಿರೋಧ ತೋರಿದರೆ ಕ್ರಮ: ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಹಿಜಾಬ್‌ ಪ್ರಕರಣ ಕುರಿತು ಹೈಕೋರ್ಟ್‌ ನೀಡಿರುವ ಆದೇಶಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಗೃಹ ಇಲಾಖೆ ಕ್ರಮ ವಹಿಸಲಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು. 

ಬಾಳೆಹೊನ್ನೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಷೇಧಾಜ್ಞೆ ನಡುವೆಯೂ  ಪ್ರತಿರೋಧ ತೋರಿದ್ದಾರೆ. ಎಲ್ಲವನ್ನು ಸರ್ಕಾರ ಗಮನಿಸುತ್ತಿದೆ, ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದರು. 

‘ಕೋರ್ಟ್‌ ಆದೇಶದ ವಿರುದ್ಧ ಪ್ರತಿಭಟನೆ ಮಾಡುವುದು ಕಾನೂನಿನ ಉಲ್ಲಂಘನೆ, ನ್ಯಾಯಾಂಗ ನಿಂದನೆಯಾಗುತ್ತದೆ. ಆದೇಶ ಪ್ರಶ್ನಿಸಿ ಅವರು ಸುಪ್ರೀ ಕೋರ್ಟ್‌ ಮೆಟ್ಟಿಲು ಏರಲು ಅವಕಾಶ ಇದೆ’ ಎಂದರು. 
‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತಂಡದವರು ಭ್ರಷ್ಟಾಚಾರಿಗಳ ಮುಖಡವಾಡ ಕಳಚುವ ಕೆಲಸದಲ್ಲಿ ತೊಡಗಿದ್ದಾರೆ. ಅದು ಮುಂದುವರಿಯಲಿದೆ’ ಎಂದು ಹೇಳಿದರು.

ಇದನ್ನೂ ಓದಿ.. ಕಾಪು: ಹಿಜಾಬ್ ತೆಗೆಯಲು ನಿರಾಕರಣೆ– ಪರೀಕ್ಷೆ ಬರೆಯದೆ 9 ವಿದ್ಯಾರ್ಥಿನಿಯರು ವಾ‍ಪಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು