ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಅಚ್ಚುಮೆಚ್ಚಿನ ‘ಮೆಣಸೆ ಶಾಲೆ’

ಕಡಿಮೆಯಾಗದ ವಿದ್ಯಾರ್ಥಿಗಳ ಸಂಖ್ಯೆ
Last Updated 18 ಏಪ್ರಿಲ್ 2021, 5:10 IST
ಅಕ್ಷರ ಗಾತ್ರ

ಶೃಂಗೇರಿ: ಎಂಟು ದಶಕಗಳನ್ನು ಕಂಡಿರುವ ಮೆಣಸೆಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಕೋವಿಡ್–19 ಪರಿಸ್ಥಿತಿಯಲ್ಲೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಿರುವುದು ಇದಕ್ಕೆ ನಿದರ್ಶನ.

1940ರಲ್ಲಿ ಪ್ರಾರಂಭಗೊಂಡ ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಶಿಕ್ಷಣ ದೊರೆಯುತ್ತದೆ. ಒಂದರಿಂದ 8ನೇ ಕ್ಲಾಸಿನವರೆಗೆ 243 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ಈ ಶಾಲೆಗೆ ಕಾಮ್ಲೆಗುಡ್ಡ, ಆನೆಗುಂದ, ಕಿಕ್ರೆ, ಕಿರುಕೋಡು, ಹಾಲಂದೂರು, ರಾಜಾನಗರ, ಕಲ್ಕಟ್ಟೆ, ಶೃಂಗೇರಿ ಪಟ್ಟಣ ಮೊದಲಾದ ಪ್ರದೇಶಗಳಿಂದ ಮಕ್ಕಳು ಬರುತ್ತಾರೆ. ಕೊಪ್ಪತಾಲ್ಲೂಕಿನ ಮೇಗೂರು, ಕಚಿಗೆ, ಕುಳಗಾರು, ಎತ್ತನಟ್ಟಿ, ಅಗಳಗಂಡಿಯಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ದೂರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಶಾಲೆಗೆ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ ಡಾ.ಆರತಿಕೃಷ್ಣ ಮತ್ತು ಸಂಪತ್ ಕುಮಾರ್ 2 ಬಸ್‌ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

‘ಶಾಲೆಯಲ್ಲಿ ಯಾವುದೇ ಕೊರತೆ ಇಲ್ಲ. ಶಾಲೆಯನ್ನು ಮಾದರಿ ಶಾಲೆ ಮಾಡಬೇಕು ಎಂಬುದು ನಮ್ಮ ಕನಸು’ ಎನ್ನುತ್ತಾರೆ ಶಿಕ್ಷಕರು. ಕ್ರೀಡಾಂಗಣ, ಸ್ಮಾರ್ಟ್‌ಕ್ಲಾಸ್, ರಂಗಮಂದಿರ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, 13 ಕಂಪ್ಯೂಟರ್, ಒಂಬತ್ತು ಶಿಕ್ಷಕರನ್ನು ಶಾಲೆ ಹೊಂದಿದೆ ಎಂದು ಎಸ್‍ಡಿಎಂಸಿ ಅಧ್ಯಕ್ಷ ಉದಯ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT