ಮಂಗಳವಾರ, ಜುಲೈ 14, 2020
27 °C

‘ಕೊರೊನಾ ತಡೆಗೆ ಲಾಕ್‌ಡೌನ್‌ ಶಾಶ್ವತವಾದ ಪರಿಹಾರ ಅಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ‘ಕೋವಿಡ್‌ ಸೋಂಕಿತರನ್ನು ಸಾಮಾಜಿಕ ಕಳಂಕಿತರು ಎನ್ನುವ ತಪ್ಪು ಅಭಿಪ್ರಾಯವಿದೆ. ಪ್ರಪಂಚದಲ್ಲಿ ಹಲವಾರು ಸೋಂಕು ಬಂದು ಹೋಗಿದೆ, ಅದರಲ್ಲಿ ಕೊರೊನಾ ಕೂಡಾ ಒಂದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.

ಶೃಂಗೇರಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಕೋವಿಡ್‌ ಬಹಳ ಸಾಮಾನ್ಯವಾದ ಸೋಂಕು. ಆದರೆ, ಇದರ ಹರಡುವಿಕೆಯ ಪ್ರಮಾಣ ಹೆಚ್ಚಾಗಿ ಇರುವುದರಿಂದ ಜನರು ಜಾಗ್ರತೆ ವಹಿಸಬೇಕು. ಈ ವೈರಸ್‍ನ್ನು ತಡೆಗಟ್ಟಲು ಸರ್ಕಾರವು ಗುಣಮಟ್ಟದ ಚಿಕಿತ್ಸಾ ಕ್ರಮ ವಹಿಸುತ್ತಿದೆ. ವಿಶ್ವದಲ್ಲಿ ಈ ಸೋಂಕಿನ ಹರಡುವಿಕೆ ಪ್ರಮಾಣ ಹೋಲಿಸಿದ್ದಲ್ಲಿ ರಾಜ್ಯದಲ್ಲಿ ಅತ್ಯಂತ ಕಡಿಮೆ ಇದೆ’ ಎಂದರು.

‘ಲಾಕ್‍ಡೌನ್ ಎಂಬುದು ಕಾಯಂ ಪರಿಹಾರವಲ್ಲ. ಜನರ ಜೀವ ಉಳಿಸಲು ಹಾಗೂ ಜೀವನ ನಡೆಸಲು ಅನಿವಾರ್ಯವಾಗಿ ಸರ್ಕಾರವು ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ವೈರಸ್ ತಡೆಗಟ್ಟಲು ಸರ್ಕಾರವು ಶ್ರಮಿಸುತ್ತಿದೆ. ಮಾಸ್ಕ್‌ ಧರಿಸಿ, ಅಂತರ ಕಾಪಾಡುವ ಮೂಲಕ ಕೊರೊನಾ ಜೊತೆ ಬದುಕಲು ಕಲಿಯಬೇಕಿದೆ’ ಎಂದರು.

ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ತರೀಕೆರೆಯ ಫಲಿತಾಂಶ ಅದಲು ಬದಲಾಗಿದೆ. ಇದು ಪುನಾರವರ್ತನೆ ಆಗಬಾರದು ಎಂದು ವೈದ್ಯರಿಗೆ ಸೂಚಿಸಿದ್ದೇನೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು