ಲಿಂಗದಹಳ್ಳಿ ಗ್ರಾಮದ ಸಹ್ಯಾದ್ರಿಪುರ ನಿವಾಸಿಗಳಾದ ಶ್ರೀಧರ(20) ಮತ್ತು ಧನುಷ್(17) ಮೃತಪಟ್ಟವರು.
ಗಣಪತಿ ಮೂರ್ತಿ ತರಲು ಗ್ರಾಮದ ಯುವಕರು ಟಾಟಾ ಏಸ್ ವಾಹನದಲ್ಲಿ ಏಳು ಯುವಕರು ತರೀಕೆರೆಗೆ ಹೊರಟಿದ್ದರು. ಭೈರಾಪುರ ಬಳಿ ತಿರುವಿನಲ್ಲಿ ವಾಹನ ಪಲ್ಟಿಯಾಗಿ ಎಲ್ಲರೂ ಗಾಯಗೊಂಡಿದ್ದರು. ಶ್ರೀಧರ್ ಮತ್ತು ಧನುಷ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಇದೇ ಗ್ರಾಮದ ಮಂಜು , ವರುಣ, ಗುರುಮೂರ್ತಿ, ಚಂದ್ರಶೇಖರ ಮತ್ತು ಸಂದೀಪ ಎಂಬುವರು ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯರ ಸಲಹೆ ಮೇರೆಗೆ ಶ್ರೀಧರ್ ಪೋಷಕರಾದ ಕುಬೇಂದ್ರ- ಪದ್ಮಾ ಮತ್ತು ಧನುಷ್ ಅವರ ಪೋಷಕರಾದ ರಮೇಶ್- ಶೋಭಾ ಅವರು ಮಕ್ಕಳ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದರು.
ಶಸ್ತ್ರಚಿಕಿತ್ಸೆ ನಡೆಸಿ ಅವರ ನಾಲ್ಕು ಕಣ್ಣುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದ್ದು, ನಾಲ್ವರು ಅಂಧರಿಗೆ ದೃಷ್ಟಿ ದೊರಕಲಿದೆ ಎಂದು ತರೀಕೆರೆ ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ದೇವರಾಜ್ 'ಪ್ರಜಾವಾಣಿ'ಗೆ ತಿಳಿಸಿದರು.