ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಪ್ರತ್ಯೇಕ ನಿಗಾ ವಾರ್ಡ್‌ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

Last Updated 24 ಮೇ 2020, 7:02 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯ ಪ್ರತ್ಯೇಕ ನಿಗಾ ವಾರ್ಡ್‌ನಲ್ಲಿದ್ದ ವ್ಯಕ್ತಿ (53) ಶೌಚಾಲಯದಲ್ಲಿ ನೇಣು ಹಾಕಿಕೊಂಡಿದ್ದಾರೆ.

ವೈದ್ಯರು ಬೆಳಿಗ್ಗೆ ತಪಾಸಣೆಗೆ ವಾರ್ಡ್‌ಗೆ ತೆರಳಿದಾಗ, ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಈ ವ್ಯಕ್ತಿಯ ಗಂಟಲ ದ್ರವ, ಮೂಗಿನ ದ್ರವ ಪರೀಕ್ಷೆ ವರದಿ ಬಂದಿತ್ತು. ಸೋಂಕು ದೃಢಪಟ್ಟಿರಲಿಲ್ಲ.

ಕೊಪ್ಪ ತಾಲ್ಲೂಕಿನ ಈ ವ್ಯಕ್ತಿಗೆ ಜ್ವರ, ಕೆಮ್ಮು ಲಕ್ಷಣಗಳಿದ್ದವು. ಹೀಗಾಗಿ ಈತನನ್ನು ನಗರದ ಕೋವಿಡ್ ನಿಗಾ ಕೇಂದ್ರಕ್ಕೆ ಕರೆ ತರಲಾಗಿತ್ತು. ಇದೇ 20ರಂದು ಪ್ರತ್ಯೇಕ ನಿಗಾ ವಾರ್ಡ್‌ಗೆ ವರ್ಗಾಯಿಸಲಾಗಿತ್ತು.

ಈತನಿಗೆ ಮೂಲವ್ಯಾಧಿ ಇತ್ತು. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT