ಕಡೂರು: ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಆದರೆ, ಟೊಮೆಟೊ ಬೆಲೆ ಮಾತ್ರ ತಳ ಕಚ್ಚಿದೆ.

ಟೊಮೆಟೊ ಉತ್ಪಾದನೆ ಹೆಚ್ಚಾಗಿರುವುದು ಬೆಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಟೊಮೆಟೊ ಅಗ್ಗಕ್ಕೆ ಕಾರಣ. 10 ಕೆ.ಜಿಯ ಒಂದು ಬಾಕ್ಸ್ (ಸಿಹಿ) ಟೊಮೆಟೊಗೆ ₹50-60 ಆದರೆ, ಹುಳಿ ಟೊಮೆಟೊ ₹55ರಿಂದ ₹65ರ ತನಕ ಬೆಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹10ರಿಂದ ₹15ಕ್ಕೆ ಟೊಮೆಟೊ ದೊರೆಯುತ್ತಿದೆ. ಕಳೆದ ವಾರ ಕೆ.ಜಿ ಟೊಮೆಟೊ ಬೆಲೆ ₹10 ಇತ್ತು. ₹15ಕ್ಕೆ ಎರಡು ಕೆ.ಜಿ ದೊರೆಯುತ್ತಿತ್ತು.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಟೊಮೆಟೊ ಬೆಳೆಯುವುದು ಕಷ್ಟ. ಬೆಳೆಗೆ ಖರ್ಚು ಮಾಡಿದ ಹಣ ವಾಪಸ್ಸು ಬಂದರೆ ಸಾಕು ಎನ್ನುವಂತಹ ಪರಿಸ್ಥಿತಿ ನಮ್ಮದಾಗಿದೆ ಎಂದು ಬಿಳವಲದ ರೈತ ರವಿಕುಮಾರ್ ತಿಳಿಸಿದರು.

ಈರುಳ್ಳಿ ಬೆಲೆ ಕೆ.ಜಿಗೆ ₹28ರಿಂದ ₹30ರಂತೆ ಕಳೆದೊಂದು ತಿಂಗಳಿನಿಂದ ಸ್ಥಿರವಾಗಿದ್ದು, ₹100ಕ್ಕೆ 3 ಕೆ.ಜಿ ಈರುಳ್ಳಿ ದೊರೆಯುತ್ತಿದೆ. ಸ್ಥಳೀಯ ಈರುಳ್ಳಿ ಖಾಲಿಯಾಗಿದ್ದು, ಸದ್ಯ ಪೂನಾ, ನಾಸಿಕ್ ತಳಿಯ ಈರುಳ್ಳಿ ಮಾರುಕಟ್ಟೆಗೆ ಬಂದಿವೆ. ಮುಂದಿನ ದಿನಗಳಲ್ಲಿ ಒಂದಿಷ್ಟು ಬೆಲೆ ಹೆಚ್ಚಾಗಬಹುದೆಂಬ ಅಂದಾಜಿದೆ. ಬೆಳ್ಳುಳ್ಳಿ ಕೆ.ಜಿಗೆ ₹90ರಿಂದ ₹100 ಇದ್ದು, ಶುಂಠಿ ಬೆಲೆಯೂ ಕಡಿಮೆಯಾಗಿ ಕೆ.ಜಿಗೆ ₹40ರಿಂದ ₹50 ದರವಿದೆ.

ಒಟ್ಟಾರೆ ಈಗ ಕೊಯ್ಲಾಗುತ್ತಿರುವ ಟೊಮೆಟೊ ಮುಗಿದರೆ ಮುಂದಿನ ಹದಿನೈದಿಪ್ಪತ್ತು ದಿನಗಳಲ್ಲಿ ಬೆಲೆ ಹೆಚ್ಚಾಗಲಿದೆಯೆಂಬ ನಿರೀಕ್ಷೆ ರೈತರದ್ದಾಗಿದೆ. ಆದರೂ ಹೆಚ್ಚು ಟೊಮೆಟೊ ಗಿಡ ನಾಟಿ ಮಾಡಿದ್ದರೆ ಬೆಲೆ ಹೆಚ್ಚು ಲಕ್ಷಣಗಳಿಲ್ಲವೆಂಬ ಅಭಿಪ್ರಾಯ ವರ್ತಕರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.