ಶುಕ್ರವಾರ, ಜನವರಿ 24, 2020
18 °C

ಕಳಸ ಸಮೀಪ ಬೈಕ್‌ನಿಂದ ಬಿದ್ದು ಇಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಕಳಸ ಸಮೀಪದ ನೇರಂಕಿ ಬಳಿ ಕಾಡುಕೋಣ ಬೈಕಿಗೆ ತಿವಿಯಲು ಮುಂದಾದಾಗ ಸವಾರರಿಬ್ಬರು ಬಿದ್ದು  ಗಂಭೀರವಾಗಿ ಗಾಯಗೊಂಡಿದ್ದಾರೆ.

ನೇರಂಕಿ ಗ್ರಾಮದ ಮಂಗಳಾ (16) ಮತ್ತು ಸಂದೀಪ್ (23)  ಗಾಯಗೊಂಡಿದ್ದಾರೆ. ಇಬ್ಬರನ್ನು ಚಿಕಿತ್ಸೆಗೆ ಮಂಗಳೂರಿಗೆ ಒಯ್ಯಲಾಗಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಇವರಿಬ್ಬರು ನೇರಂಕಿಯಿಂದ ಹಿರೇಬೈಲಿಗೆ ತೆರಳುತ್ತಿದ್ದರು.

ಪ್ರತಿಕ್ರಿಯಿಸಿ (+)