ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಳ್ಳಿಯಲ್ಲಿ ಉಣ್ಣಕ್ಕಿ ಉತ್ಸವ

Last Updated 8 ನವೆಂಬರ್ 2022, 6:08 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾನಳ್ಳಿಯಲ್ಲಿ ಉಣ್ಣಕ್ಕಿ ಉತ್ಸವವು ಈಚೆಗೆ ವಿಜೃಂಭಣೆಯಿಂದ ನಡೆಯಿತು.

ಭಕ್ತಾದಿಗಳು ಮಹಾ ಮಂಗಳಾರತಿ ಸಮಯದಲ್ಲಿ ಹುತ್ತವನ್ನು ಕಣ್ತುಂಬಿ ಕೊಂಡರು. ಉತ್ಸವದ ಅಂಗವಾಗಿ ತಳಿರು ತೋರಣ, ಪುಷ್ಪಾಲಂಕಾರ, ವಿದ್ಯುತ್ ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.

ಕರುವೊಂದನ್ನು ಹುತ್ತದ ಸುತ್ತ ಪ್ರದಕ್ಷಣೆ ಹಾಕುವ ಸಂದರ್ಭದಲ್ಲಿ ಪುರಿ ಎರಚಿದರು. ಇಲ್ಲಿನ 16 ಅಡಿ ಎತ್ತರದ ಹುತ್ತವನ್ನು ಆರಾಧಿಸಿದರು.

ಬಣಕಲ್ ಹೊರಟ್ಟಿಯಲ್ಲಿ ವಿಜೃಂಭಣೆಯ ಉಣ್ಣಕ್ಕಿ ಉತ್ಸವ ನಡೆಯಿತು. ಉತ್ಸವದ ಅಂಗವಾಗಿ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ತಳಿರು, ತೋರಣ, ಪುಷ್ಪ‍ ಮಾಲೆಗಳಿಂದ ಆಕರ್ಷಕವಾಗಿ ಸಂಗರಿಸಲಾಗಿತ್ತು. ಬಣಕಲ್ ಸುತ್ತಮುತ್ತಲಿನ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT