ಬಾಳೆಹೊನ್ನೂರು: ಚಿಕ್ಕಮಗಳೂರು ತಾಲ್ಲೂಕಿನ ಮತ್ತಾವರ ಗ್ರಾಮದ ಪಾರ್ಶ್ವನಾಥ ಬಸದಿಯ ಸುಖನಾಸಿಯಲ್ಲಿರುವ ಹೊಯ್ಸಳ ದೊರೆ ವಿನಯಾದಿತ್ಯನ, ಪ್ರಕಟಿತ ದಾನ ಶಾಸನದ ಮೇಲ್ಭಾಗದ ಫಲಕದಲ್ಲಿರುವ ಎರಡು ಅಪ್ರಕಟಿತ ಪ್ರತಿಮಾ ಶಾಸನಗಳು ದೊರೆತಿವೆ.

ಇತಿಹಾಸ ಸಂಶೋಧಕ ಎಚ್.ಆರ್. ಪಾಂಡುರಂಗ ಶೋಧನೆ ಮಾಡಿದ್ದು, ಇದು ‘ಮತ್ತಾವರ’ ಪ್ರಾಚೀನ ಜೈನ ಇತಿಹಾಸದ ಮೇಲೆ ಬೆಳಕು ಚೆಲ್ಲಲಿದೆ.

‘ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ಹೊಯ್ಸಳರ ಆರಂಭ ಕಾಲದ ದೊರೆ ವಿನಯಾದಿತ್ಯ ತನ್ನ ಆಡಳಿತ ಕಾಲದಲ್ಲಿ ಮತ್ತವೂರಿನ ಪ್ರಜೆಗಳ ಮತ್ತು ಅಲ್ಲಿನ ಜೈನ ವ್ಯಾಪಾರಿ ಮಾಣಿಕ ಸೆಟ್ಟಿಯ ಆಗ್ರಹದ ಅಪೇಕ್ಷೆಯ ಮೇರೆಗೆ ಊರೊಳಗೆ ಒಂದು ಬಸದಿಯನ್ನು ಕಟ್ಟಿಸಿ ಅದರ ಪೂಜಾ ಸೇವಾರ್ಥಗಳ ನಿಮಿತ್ತ ಕ್ರಿ.ಶ. ಏಪ್ರಿಲ್ 9, 1077ರಂದು ಭೂದಾನ ಮಾಡಿ ಮತ್ತವೂರು (ಮತ್ತಾವರ) ಪ್ರಜೆಗಳು ನೀಡಬೇಕಾಗಿದ್ದ ಮನೆದೆರೆ, ಮದುವೆದೆರೆ, ಕೊಡತಿವಣ ಹಾಗೂ ಕತ್ತರಿವಣ ಮೊದಲಾದ ತೆರಿಗೆಗಳನ್ನು ರದ್ದು ಮಾಡಿ ಬಸದಿಯ ಪಕ್ಕದಲ್ಲಿ ಹಲವು ಮನೆಗಳನ್ನು ಕಟ್ಟಿಸಿ ಅದಕ್ಕೆ ‘ರಿಷಿಹಳ್ಳಿ’ ಎಂದು ನಾಮಕರಣ ಮಾಡುತ್ತಾನೆ. ಆ ಸಮಯದಲ್ಲಿ ಬಸದಿಯ ಅರ್ಚಕರು ಅಥವಾ ಜೈನಗುರುಗಳಾಗಿದ್ದ ದೇವೇಂದ್ರಸೇನ ಪಂಡಿತರು ಸಹ ಅಲ್ಲಿರುತ್ತಾರೆ’.

ಈ ದಾನ ಶಾಸನದಲ್ಲಿ ಒಟ್ಟು 40 ಸಾಲುಗಳಿದ್ದು, ಈ ವಿವರಗಳು ಇವೆ. ಆದರೆ, ಈ ಶಾಸನದ ಅಗ್ರ ಭಾಗದಲ್ಲಿರುವ ಅರ್ಧ ಚಂದ್ರಾಕಾರದ ಫಲಕದ ಮಧ್ಯೆ ಇರುವ ತೀರ್ಥಂಕರರ ಶಿಲ್ಪದ ಎರಡೂ ಬದಿ ಮುನಿಗಳ ಹಾಗೂ ಗಡ್ಡಧಾರಿ ವ್ಯಕ್ತಿಯ ಶಿಲ್ಪಗಳಿದ್ದು, ಬಲಭಾಗದಲ್ಲಿ ಪದ್ಮಾವತಿ ಹಾಗೂ ಎಡಭಾಗದಲ್ಲಿ ಹಸು–ಕರುಗಳ ಚಿತ್ರಣಗಳಿದ್ದು, ಫಲಕದ ಮೇಲೆ ನಾಗಶಿಲ್ಪ ಮತ್ತು ಸೂರ್ಯ ಹಾಗೂ ಚಂದ್ರ ಮತ್ತು ಹಸುವಿನ ಕೊಂಬಿನ ಮಧ್ಯೆ ಅಪ್ರಕಟಿತ ತಲಾ ಎರಡು ಸಾಲಿನ ಎರಡು ಶಾಸನಗಳಿವೆ ಎಂದು ಅವರು ವಿವರಿಸಿದ್ದಾರೆ.

ಅಪ್ರಕಟಿತ ಪ್ರತಿಮಾ ಶಾಸನಗಳು ಕಲ್ಯಾಣ ಚಾಲುಕ್ಯರ ಕಾಲದ ಕನ್ನಡ ಲಿಪಿಯಲ್ಲಿದ್ದು, ಈ ಶಾಸನೋಕ್ತ ವ್ಯಕ್ತಿಗಳು ಹಾಗೂ ಉಬ್ಬುಶಿಲ್ಪಗಳು ಅಂದಿನ ಮತ್ತವೂರಿನ ಬಸದಿ ಗುರುಗಳಾದ ದೇವೇಂದ್ರ ಸೇನ ಪಂಡಿತರು ಹಾಗೂ ಜೈನವ್ಯಾಪಾರಿ ಮಾಣಿಕಸೆಟ್ಟಿಯರವೇ ಆಗಿವೆ ಎಂಬುದು ತಿಳಿದು ಬರುತ್ತದೆ ಎಂದು ಪಾಂಡುರಂಗ ಹೇಳಿದ್ದಾರೆ.

ಶಾಸನ ಶೋಧ ಕ್ಷೇತ್ರ ಕಾರ್ಯದಲ್ಲಿ ಬಸದಿಯ ಅರ್ಚಕ ಶಾಂತಕುಮಾರ್ ಇಂದ್ರ ಹಾಗೂ ಟಿ.ಪಿ.ಪ್ರಭಾಕರ್ ನಾಯಕ್ ಸಹಕಾರ ನೀಡಿದ್ದು, ಎಚ್.ಎಂ.ನಾಗರಾಜರಾವ್ ಶಾಸನ ಅಧ್ಯಯನದ ಮಾರ್ಗದರ್ಶನ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.