ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನ ಮೌಲ್ಯಗಳನ್ನು ಜಗತ್ತಿಗೆ ನೀಡಿದ ವಾಲ್ಮೀಕಿ’

ಶೃಂಗೇರಿ: ವಾಲ್ಮೀಕಿ ಜಯಂತಿಯಲ್ಲಿ ಶಾಸಕ ಟಿ.ಡಿ. ರಾಜೇಗೌಡ
Last Updated 10 ಅಕ್ಟೋಬರ್ 2022, 3:14 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಶೃಂಗೇರಿ: ‘ಮಹರ್ಷಿ ವಾಲ್ಮೀಕಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಎತ್ತಿ ತೋರಿಸಿದವರು. ಸಚ್ಚಾರಿತ್ರ್ಯ, ಸದ್ಭಾವನಾಶೀಲ ರಾಮ, ಲಕ್ಷ್ಮಣ ಮತ್ತು ಸೀತೆಯನ್ನು ಪರಿಚಯಿಸಿದ ವಾಲ್ಮೀಕಿ ಅವರ ಜೀವನವೇ ಉನ್ನತ ಮೌಲ್ಯಗಳಿಂದ ಕೂಡಿದ್ದು’ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಶೃಂಗೇರಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

`ವಾಲ್ಮೀಕಿ ರಾಮಾಯಣವು ಆದರ್ಶವಾದ ಗ್ರಂಥ. ಪಿತೃವಾಕ್ಯಕ್ಕೆ ಬದ್ಧನಾಗಿ ರಾಮ ಜೀವನದ ಎಲ್ಲ ಮಜಲುಗಳನ್ನು ದಾಟಿ ಪುಣ್ಯ ಪುರುಷೋತ್ತಮನಾದ ಕಾವ್ಯ. ಈ ಕಾವ್ಯ ನಿರಂತರ ಮೌಲ್ಯಗಳನ್ನು ನೀಡುವಲ್ಲಿ ಯಶಸ್ಸು ಗಳಿಸಿದೆ. ಮನುಷ್ಯ ಮನುಷ್ಯನಾಗಿ ಬದುಕುವ ಕಲೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಾಗಿದ’ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಮಾತನಾಡಿ, `ಭೂಮಿ ಹುಣ್ಣಿಮೆಯ ಶುಭದಿನದಂದು ಮಹಾನ್ ವ್ಯಕ್ತಿಯನ್ನು ಸ್ಮರಿಸುವುದು ಶ್ಲಾಘನೀಯ’ ಎಂದರು.

ಉಪನ್ಯಾಸಕ ಚೇತನ್ ಮಾತನಾಡಿ, ಧರ್ಮದಲ್ಲಿರುವ ಅರ್ಥ, ಕಾಮ, ಮೋಕ್ಷಗಳ ಬಗ್ಗೆ ವಿವೇಕ ಪೂರ್ಣವಾದ ಸಂದೇಶವನ್ನು ನೀಡುವಲ್ಲಿ ಮಹರ್ಷಿ ಯಶಸ್ಸು ಗಳಿಸಿದವರು. ಮನುಷ್ಯನಾಗುವುದನ್ನು ಬೆಂಬಲಿಸುವುದೇ ಧರ್ಮ ಸಂಸ್ಥಾಪಕರ ಆಶಯ’ ಎಂದರು.

ತಹಶೀಲ್ದಾರ್ ಗೌರಮ್ಮ, ಸಮಾಜ ಕಲ್ಯಾಣ ಇಲಾಖೆಯ ನಟರಾಜ್, ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ದಯಾನಂದ್, ಅಕ್ಷರ ದಾಸೋಹದ ಮಂಜುನಾಥ್ ನಾಯಕ್, ಮಲೆನಾಡು ಬೋವಿ ಸಮಾಜದ ಚಂದ್ರಶೇಖರ್, ಡಿಎಸ್‍ಎಸ್ ಘಟಕದ ಅಧ್ಯಕ್ಷ ಶಂಕರ್, ಮಹಿಳಾ ಘಟಕದ ಜಲಜಾ, ಲ್ಯಾಂಪ್ ಸೊಸೈಟಿ ನೀರ್ದೆಶಕರ ಕೆಂಪಣ್ಣ ಮತ್ತು ಇಲಾಖಾ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT