ಚಿಕ್ಕಮಗಳೂರು: ‘ದೈನಂದಿನ ಜೀವನದಲ್ಲಿ ಬರುವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು, ನೋವಿಗೆ ಸಾಂತ್ವನ ಪಡೆಯುವ ಉದ್ದೇಶದಿಂದ ದೇವರು, ದೇವಸ್ಥಾನ, ಆಚಾರ ವಿಚಾರಗಳನ್ನು ಮಾಡಿಕೊಂಡಿದ್ದು, ಸದುದ್ದೇಶಕ್ಕೆ ಬಳಸಿಕೊಳ್ಳಬೇಕು’ ಎಂದು ದೊಡ್ಡಕುರುಬರಹಳ್ಳಿ ಬಸವತತ್ವ ಪೀಠದ ಮರುಳಾಸಿದ್ದ ಸ್ವಾಮೀಜಿ ಹೇಳಿದರು.

ಶುಕ್ರವಾರ ಕಳಸಪುರದಲ್ಲಿ ವೀರಭದ್ರೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶ, ಶಿಲಾಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ನಮ್ಮ ಕಷ್ಟ, ನೋವುಗಳಿಗೆ ಸ್ಪಂದಿಸಲು ದೇವರಿದ್ದಾನೆ ಎಂಬ ನಂಬಿಕೆಯನ್ನು ಜಾಗೃತಗೊಳಿಸಬೇಕು. ಆ ನಂಬಿಕೆ ಇಟ್ಟುಕೊಂಡು ಪ್ರಾಮಾಣಿಕವಾಗಿ ಇರಬೇಕು. ಅನ್ಯರ ಬಗ್ಗೆ ಆಡಿಕೊಂಡಿದ್ದರೆ ನಮ್ಮ ಬದುಕು ಹಸನಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಶಿಕ್ಷಣ, ಧಾರ್ಮಿಕ ಕೇಂದ್ರಗಳು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕಾದ ಅವಶ್ಯಕತೆಯಿದ್ದು, ಆ ನಿಟ್ಟಿನಲ್ಲಿ ಪೂಜ್ಯ ಸ್ವಾಮೀಜಿಯವರು ದೇವಸ್ಥಾನಗಳಿಗೆ ಚಾಲನೆ ನೀಡಿದ್ದಾರೆ ಎಂದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, 12ನೇ ಶತಮಾನದಲ್ಲಿ ಬಸವೇಶ್ವರರು ವಚನ ಸಾಹಿತ್ಯದ ಮೂಲಕ ಶೋಷಿತ ವರ್ಗದವರನ್ನ ಸಮಾಜದ ಮುನ್ನೆಲೆಗೆ ತಂದು ಸಮಸಮಾಜ ನಿರ್ಮಾಣ ಮಾಡಿದರು. ವಚನಗಳ ಮೂಲಕ ಮೂಢನಂಬಿಕೆಗಳನ್ನು ದೂರ ಮಾಡಿ, ಶೋಷಿತ ವರ್ಗದವರಿಗೆ ಉಚಿತ ದಾಸೋಹ, ಅನ್ನದಾಸೋಹ, ಜ್ಞಾನ ದಾಸೋಹ ನೀಡಿ ಸಮಾಜದ ಮುನ್ನೆಲೆಗೆ ತಂದರು ಎಂದರು.

ಲಕ್ಷ್ಮಿರಂಗನಾಥ ಸ್ವಾಮಿ ಅಭಿವೃದ್ಧಿ ಸಮಿತಿ ಸದಸ್ಯರು, ವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿ ಸದಸ್ಯರು, ಕಳಸಾಪುರ, ಗಾಣಿಹಳ್ಳಿ, ಅಣ್ಮಿಂದಡಿಕೆ, ಹುಲ್ಲೆನಹಳ್ಳಿ, ದೇವಗೊಂಡನಹಳ್ಳಿ, ಕಟ್ಟೇತಿಮ್ಮನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.