ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

ವಿಶ್ವಕರ್ಮ ಜಯಂತಿಯಲ್ಲಿ ತಹಶೀಲ್ದಾರ್ ರಮೇಶ್
Last Updated 19 ಸೆಪ್ಟೆಂಬರ್ 2020, 4:03 IST
ಅಕ್ಷರ ಗಾತ್ರ

ಮೂಡಿಗೆರೆ: ನಾಡಿನ ಕಲೆ, ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ತಹಶೀಲ್ದಾರ್ ರಮೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ಜಯಂತಿ ಯಲ್ಲಿ ಅವರು ಮಾತನಾಡಿದರು.

‘ಕನ್ನಡನಾಡು ಇಡೀ ವಿಶ್ವದಲ್ಲಿಯೇ ಕಲೆ ಹಾಗೂ ವಾಸ್ತುಶಿಲ್ಪದಿಂದ ಹೆಸರುವಾಸಿಯಾಗಿದೆ. ಈ ಕಲೆ ಹಾಗೂ ವಾಸ್ತುಶಿಲ್ಪವನ್ನು ನಿರ್ಮಿಸುವಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಇಂದಿಗೂ ಪಂಚ ಕಸುಬುಗಳನ್ನು ಅನುಸರಿಸುವ ವಿಶ್ವಕರ್ಮ ಜನಾಂಗವು ಸಮಾಜದ ಎಲ್ಲಾ ವರ್ಗದ ಜನರಿಗೂ ಅಗತ್ಯವಾದ ವಸ್ತುಗಳನ್ನು ತಯಾರಿಸಿ ಕೊಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ’ ಎಂದರು.

ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ವಿಠಲ್ ಆಚಾರ್ ಮಾತನಾಡಿ, ‘ಜನಾಂಗದ ಬಹುತೇಕ ಮಂದಿ ಕುಲಕಸುಬನ್ನೇ ಆಶ್ರಯಿಸಿದ್ದು, ಕೊರೊನಾದಿಂದಾಗಿ ಕುಲಕಸುಬನ್ನು ಆಶ್ರಯಿಸಿದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರವು ಇತರೆ ಸಮುದಾಯಗಳಿಗೆ ನೀಡಿದಂತೆ ವಿಶ್ವಕರ್ಮ ಜನಾಂಗಕ್ಕೂ ವಿಶೇಷ ಆರ್ಥಿಕ ನೆರವು ನೀಡಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಳಗೊಳಿಸಿ, ಅಭಿವೃದ್ಧಿ ನಿಗಮದಿಂದ ಜನಾಂಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಕುಟುಂಬಗಳಿಗೂ ನೆರವು ಸಿಗುವಂತೆ ಮಾಡಬೇಕು’ ಎಂದರು.

ಸಂಘದ ಗೌರವಧ್ಯಕ್ಷ ಜಿ.ಡಿ.ಮಂಜುನಾಥ್ ಆಚಾರ್ ಮಾತನಾಡಿ, ‘ಕುಲ ಕಸುಬುಗಳು ನಶಿಸುತ್ತಿರುವ ವೇಳೆ ಸರ್ಕಾರವು ಅವುಗಳನ್ನು ಮುನ್ನೆಡೆಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತೆ ಮಾಡಲು ವಿಶೇಷ ಯೋಜನೆ ರೂಪಿಸಬೇಕು. ಶಿಕ್ಷಣ, ಸರ್ಕಾರಿ ಉದ್ಯೋಗಗಳಲ್ಲಿ ವಿಶ್ವಕರ್ಮ ಜನಾಂಗದವರಿಗೆ ಅವಕಾಶ ಕಲ್ಪಿಸಲು ವಿಶೇಷ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು’ ಎಂದರು.

ತಾಲ್ಲೂಕು ವಿಶ್ವಕರ್ಮ ಸಮಾಜದ ಪದಾಧಿಕಾರಿಗಳಾದ ಅಂಗಡಿ ಸುಬ್ರಹ್ಮಣ್ಯ, ಪಟೇಲ್ ಮಂಜುನಾಥ್, ಪರಮೇಶ್ ಆಚಾರ್ ಬಾಪುನಗರ, ರಮೇಶ್ ಕಡಿದಾಳ್, ಮಂಜುನಾಥ್, ಚಂದ್ರಾಚಾರ್, ಅಶೋಕ್, ರಾಜಾಚಾರ್ ಉಗ್ಗೆಹಳ್ಳಿ, ಮಂಜುನಾಥ್ ದರ್ಶನ, ರಮೇಶ್ ಆಚಾರ್, ಅಣ್ಣಪ್ಪಾಚಾರ್, ಆಶಾ ಜನ್ನಾಪುರ, ಸತ್ಯನಾರಾಯಣ, ಗುರುರಾಜ್ ಹಾಲ್ಮಠ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT