ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಕಾಡಾನೆ ಹಾವಳಿ, ಹೋರಾಟಕ್ಕೆ ರೈತರು ಸಜ್ಜು

ಮೃತಪಟ್ಟವರು, ಗಾಯಗೊಂಡವರು, ಬೆಳೆ ಹಾನಿ ಪರಿಹಾರಕ್ಕೆ ರೈತರ ಪಟ್ಟು
Last Updated 6 ಸೆಪ್ಟೆಂಬರ್ 2022, 16:22 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಲ್ಲಿ ಕಾಡಾನೆ ಹಾವಳಿಯಿಂದ ಕಂಗಾಲಾಗಿರುವ ರೈತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ನೂರಾರು ರೈತರು ಪ್ರತಿಭಟನೆ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮುಖಂಡ ಬಿ.ಕೆ. ಲಕ್ಷ್ಮಣ್ ಕುಮಾರ್ ಮಾತನಾಡಿ, ‘ಮೂಡಿಗೆರೆ ತಾಲ್ಲೂಕಿನ ಬಹುತೇಕ ಕಡೆ ಕಾಡಾನೆ ಹಾವಳಿ ಮಿತಿಮೀರಿದೆ. ಪ್ರಾಣಹಾನಿ, ಬೆಳೆಹಾನಿ ಆಗುತ್ತಿದೆ. ಅರಣ್ಯ ಇಲಾಖೆ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಸೆ.23ರಂದು ಮೂಡಿಗೆರೆ ಪಟ್ಟಣದಲ್ಲಿ ಸಾವಿರಾರು ರೈತರು ಸೇರಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ’ ಎಂದರು.

ಮುಖಂಡ ಬಿ.ಎಸ್. ಜಯರಾಂ ಮತನಾಡಿ, ‘ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಕೆಂಜಿಗೆ ಭಾಗದಲ್ಲಿ ಅಳವಡಿಸಿರುವ ವಿದ್ಯುತ್ ತೂಗು ಬೇಲಿಯನ್ನು ಇತರೆ ಪ್ರದೇಶಗಳಿಗೂ ವಿಸ್ತರಿಸಬೇಕು. ಕಾಡುಕೋಣಗಳು ಸಹ ಬಾರದಂತೆ ತಡೆಯಲು ಬೇಲಿ ತಳದಲ್ಲಿ ಮತ್ತೊಂದು ಸಾಲು ಹೆಚ್ಚುವರಿ ತಂತಿ ಅಳವಡಿಸಬೇಕು. ಹುಲಿಗಳನ್ನೂ ಹಿಡಿದು ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.

ಹೋರಾಟ ಸಮಿತಿ ಸಂಚಾಲಕ ಎಂ.ಕೆ. ಸದಾಶಿವ ಮಾತನಾಡಿ, ‘ಕಾಡಾನೆಯಿಂದ ಮೃತಪಟ್ಟವರು ಮತ್ತು ಗಾಯಗೊಂಡವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಪಾಳುಬಿಟ್ಟಿರುವ ತರಿ ಜಮೀನಿಗೂ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಡಿ.ಮನೋಹರ್, ಮುಖಂಡರಾದ ಬಿ.ಆರ್.ಸುಧೀರ್, ಎಸ್.ಎ.ವಾಸುದೇವ್, ಎಂ.ಮಂಜುನಾಥಗೌಡ, ಡಿ.ಆರ್‌. ಪುಟ್ಟಸ್ವಾಮಿಗೌಡ, ವನಶ್ರೀ ಲಕ್ಷ್ಮಣಗೌಡ, ಕೆ.ಪಿ.ಭಾರತಿ, ಕೆ.ಆರ್.ಸುಂದರೇಶ್, ಎಚ್.ಬಿ.ಮಂಜುನಾಥಗೌಡ, ಜಿ.ಎಸ್.ಲಕ್ಷ್ಮಣ್, ಎಚ್.ಜೆ.ಮಾಧವಗೌಡ, ನಿಖಿಲ್ ಚಕ್ರವರ್ತಿ, ಪ್ರಸನ್ನ ಮರಗುಂದ, ಪ್ರಸನ್ನ ಗೌಡಹಳ್ಳಿ, ಎಂ.ಎಸ್.ಸಂತೋಷ್, ರೇವಣ್ಣಗೌಡ, ಕೆ.ಪಿ.ರಮೇಶ್, ಕೆ.ಪಿ.ನಾಗೇಶ್, ಕೆ.ಬಿ.ಲಕ್ಷ್ಮಣಗೌಡ, ಎಸ್.ಜಿ.ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT