ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ನದಿ ತೀರದಲ್ಲಿ ವಾಮಾಚಾರ: ಸ್ಥಳೀಯರ ಆಕ್ರೋಶ

Published 8 ಫೆಬ್ರುವರಿ 2024, 14:02 IST
Last Updated 8 ಫೆಬ್ರುವರಿ 2024, 14:02 IST
ಅಕ್ಷರ ಗಾತ್ರ

ಕಳಸ: ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆಯ ಭದ್ರಾ ನದಿ ತೀರದಲ್ಲಿ ಬುಧವಾರ ವಾಮಾಚಾರ ನಡೆದಿದೆ ಎಂದು ಆರೋಪಿಸಿರುವ ಸ್ಥಳೀಯರು, ಇದನ್ನು ಖಂಡಿಸಿದ್ದಾರೆ.

ನದಿ ದಂಡೆಯಲ್ಲಿ ದೊಡ್ಡ ಗಾತ್ರದಲ್ಲಿ ಬಣ್ಣದ ರಂಗೋಲಿ ಹಾಕಿ ವಾಮಾಚಾರ ನಡೆಸಿರುವುದು ಕಂಡು ಬಂದಿದೆ. ಸಮೀಪದಲ್ಲೇ 4 ಸತ್ತ ಕುರಿಗಳು ನದಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸ್‌ ಠಾಣೆ ಮತ್ತು ಪಂಚಾಯಿತಿಗೆ  ಮಾಹಿತಿ ನೀಡಿದ್ದೇವೆ ಎಂದು ಸ್ಥಳೀಯರು ಹೇಳಿದರು.

ಕಳಸ ಠಾಣಾಧಿಕಾರಿ ಬ್ರಹ್ಮಪ್ಪ ಬಿಳಗಲಿ, ಅಭಿವೃದ್ಧಿ ಅಧಿಕಾರಿ ಕವೀಶ್, ಮೋಹನ್ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸತ್ತ ಕುರಿಗಳನ್ನು ನದಿಯಿಂದ ಹೊರತೆಗೆದು ಹೂಳಲಾಯಿತು.

ವಾಮಾಚಾರ ನಡೆದ ಸ್ಥಳದಲ್ಲಿ ತಿಪಟೂರಿನ ಅಂಗಡಿಯೊಂದರ ಚೀಲ ಪತ್ತೆ ಆಗಿದ್ದು ಆ ಊರಿನ ಆಸುಪಾಸಿನ ಜನರು ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT